ಯದೀಚ್ಛತಿ ವಶೀಕರ್ತುಂ ಜಗದೇಕೇನ ಕರ್ಮಣಾ
ಪರಾಪವಾದಸಸ್ಯೇಭ್ಯೋ ಗಾಂ ಚರಂತೀಂ ನಿವಾರಯ ||
ಯಾವುದಾದರೂ ಒಂದು ಕೆಲಸದಿಂದ ನಿನ್ನ ಸುತ್ತಲಿನ ಜನಗಳೆಲ್ಲರನ್ನೂ ನಿನ್ನ ವಶವರ್ತಿಯನ್ನಾಗಿ ಮಾಡಿಕೊಳ್ಳುವ ಇಚ್ಛೆಯಿದ್ದರೆ ಆ ಮಾಡಬೇಕಾದ ಒಂದು ಕೆಲಸವೇ, ಇನ್ನೊಬ್ಬರ ಕುರಿತಾಗಿ ಮಾತುಗಳನ್ನು ಆಡಿಕೊಳ್ಳುವ ದುರಭ್ಯಾಸವನ್ನು ತೊರೆದುಬಿಡು.
ಸುಭಾಷಿತಕಾರನು ಇಲ್ಲಿ ಪರಾಪವಾದವನ್ನು ಸಸ್ಯ ಎಂಬುದಾಗಿಯೂ ಅದನ್ನು ಆನಂದಿಸುವ ಮಾತುಗಳನ್ನು ಗೋವೆಂದೂ ಹೇಳಿದ್ದಾನೆ. ಗೋ ಶಬ್ದಕ್ಕೆ ಸಂಸ್ಕೃತದಲ್ಲಿ ಹಸುವೆಂಬ ಅರ್ಥವೊಂದಾದರೆ ಮಾತು ಅನ್ನುವ ಅರ್ಥ ಇನ್ನೊಂದು. ಸುಭಾಷಿತಕಾರನು ಭಾಷೆಯ ಈ
ಸೌಕರ್ಯವನ್ನು ಸೊಗಸಾಗಿ ಬಳಸಿಕೊಂಡಿದ್ದಾನೆ.
ಶ್ರೀ ನವೀನ ಗಂಗೋತ್ರಿ