ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಆಶ್ರಯದಲ್ಲಿ ಜರುಗಿದ ಭಗವದ್ಗೀತಾ ಅಭಿಯಾನದ ಅಂಗವಾಗಿ ನಡೆಸಲಾದ ರಾಜ್ಯ ಮಟ್ಟದ ಭಗವದ್ಗೀತಾ ಅಭಿಯಾನ ಫಲಿತಾಂಶ ಪ್ರಕಟವಾಗಿದೆ.
ರಾಜ್ಯಾದ್ಯಂತ ನವೆಂಬರ್ ತಿಂಗಳಿನಲ್ಲಿ ಸಾವಿರಕ್ಕೂ ಜಾಸ್ತಿ ಗೀತಾ ಪಠಣ ಕೇಂದ್ರಗಳಲ್ಲಿ ಗೀತಾ ಅಭಿಯಾನ ನಡೆಸಲಾಯಿತು. ಭಜನಾ ಮಂಡಳಿಗಳು ದೇವಸ್ಥಾನಗಳಲ್ಲಿ ಸಹ ಶ್ಲೋಕ ಕೇಂದ್ರಗಳನ್ನೂ ನಡೆಸಿವೆ. ಕೆಲವು ಕಡೆ ಗೀತೆಯ ಕುರಿತಾಗಿ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಗೀತೆಯ 3 ನೇ ಅಧ್ಯಾಯದ ಕಂಠಪಾಠ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಡಿಸೆಂಬರ್ ತಿಂಗಳ ಮೊದಲನೇ ಹಾಗೂ ಎರಡನೇ ವಾರ ರಾಜ್ಯಾದ್ಯಂತ ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಈ ಸ್ಪರ್ಧೆ ನಡೆಯಿತು. ಸರಕಾರಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾನ್ವೆಂಟ್ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಜಿಲ್ಲಾವಾರು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ಆನ್ಲೈನ್ನಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆಯಿತು. ಬೆಂಗಳೂರು ಸ್ವರ್ಣವಲ್ಲಿ ಪ್ರತಿಷ್ಠಾನದ ಸದಸ್ಯರು ಹಾಗೂ ಸಂಸ್ಕೃತ ಪ್ರಾಧ್ಯಾಪಕರು ಈ ಸ್ಪರ್ಧೆಯನ್ನು ನಡೆಸಿಕೊಟ್ಟರು.
ಐದು, ಆರು ಏಳನೇ ವರ್ಗದ ವಿದ್ಯಾರ್ಥಿಗಳಿಗೆ ಕರ್ಮ, ಭಕ್ತಿ, ಜ್ಞಾನ ಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮದಿಂದ ಐದು ಸ್ಥಾನ ಹಂಚಿಕೊಂಡಿದ್ದಾರೆ. ಕಂಠಪಾಠ ಸ್ಪರ್ಧೆಯಲ್ಲಿ ಚಿನ್ಮಯ ಆರ್ ಧೂಳಿ ಉತ್ತರಕನ್ನಡ ಎಚ್ ಪಿ ಎಸ್ ಬೀಸಗೋಡ್ ಯಲ್ಲಾಪುರ, ಶರಣ್ಯಾ ಭಟ್ ಬೆಂಗಳೂರು ನ್ಯೂ ಕೇಂಬ್ರಿಡ್ಜ್ ಇಂಟನ್ರ್ಯಾಷನಲ್ ಶಾಲೆ, ಸುಧನ್ವಾ ಎಮ್ ಕೆ ಹಾಸನ, ವರ್ಷಿಣಿ ಎಸ್ ಹೆಗಡೆ ಉತ್ತರಕನ್ನಡ, ಚಂದನಾ ಎಚ್ ಎಸ್ ಶಿರಸಿ, ಆತ್ಮಿಕಾ ದಕ್ಷಿಣ ಕನ್ನಡ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮೂಡಬಿದ್ರೆ.
ಪ್ರೌಢ ವಿಭಾಗಕ್ಕೆ ನಡೆದ ಕಂಠಪಾಠ ಸ್ಪರ್ಧೆಯಲ್ಲಿ ಪ್ರಜ್ಞಾ ಭಟ್ ವಾಗ್ದೇವಿ ವಿಲಾಸ್ ಶಾಲೆ ಬೆಂಗಳೂರು, ಸ್ನೇಹಾ ಆನಂದ ಶರ್ಮಾ ಉತ್ತರಕನ್ನಡ ಸರಕಾರಿ ಪ್ರೌಢಶಾಲೆ ಮಾರಿಗುಡಿ, ಯಶಸ್ವಿನೀ ಹೆಗಡೆ ಉತ್ತರಕನ್ನಡ ಚಂದನಾ ಪ್ರೌಢಶಾಲೆ ಶಿರಸಿ, ಅಮೃತಾ ಎ. ಅಮೃತವಿದ್ಯಾಲಯ ದಾವಣಗೆರೆ, ಧನ್ಯಾ ಎಸ್. ಉಮ್ರಾಣಿ ಶಿವಮೊಗ್ಗ ಭಾರತೀಯ ವಿದ್ಯಾಪೀಠ ಸ್ಥಾನ ಪಡೆದಿದ್ದಾರೆ.
ಭಾಷಣ ಸ್ಪರ್ಧೆಯಲ್ಲಿ ಮಾನ್ಯಾ ಎಮ್. ಹೆಗಡೆ ಉತ್ತರಕನ್ನಡ ಸೇಂಟ್ ಅಂಥೋನಿ ಸ್ಕೂಲ್ ಶಿರಸಿ, ಮೃದುಲಾ ಆನಂದಕುಮಾರ್ ಬೆಂಗಳೂರು ಎಮ್.ಇ.ಎಸ್. ಕಿಶೋರ ಕೇಂದ್ರ ಸಮೃದ್ಧಿ ಉಡುಪಿ ಕುವೆಂಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಕ್ಕಟ್ಟೆ, ಪ್ರದ್ಯುಮ್ನ ಇ.ವಿ. ಚಿಕ್ಕಮಂಗಳೂರು ಸಾಯಿ ಏಂಜೆಲ್ಸ್ ಶಾಲೆ, ಶ್ರೀರಾಮಪುರ, ಶ್ರೀಶ ವಿ.ಭಟ್ ಧಾರವಾಡ ರಾಷ್ಟ್ರೋತ್ಥಾನ ವಿದ್ಯಾಲಯ ಸ್ಥಾನ ಪಡೆದಿದ್ದಾರೆ.
ಭಾಷಣ ನಡೆದ ಸ್ಪರ್ಧೆಯಲ್ಲಿ 8, 9, 10ನೇ ವರ್ಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಭೂಮಿಕಾ ಎಸ್. ಭಟ್ ಸಿ.ವಿ.ಎಸ್.ಕೆ. ಕುಮಟಾ ಉತ್ತರಕನ್ನಡ, ಅನಘಾ ಬಿ. ಎಲ್.ಬೆಂಗಳೂರು ಶ್ರೀ ವಿದ್ಯಾಮಂದಿರ, ಆಕಾಂಕ್ಷಾ ಜೆ. ಎಸ್. ಹಾಸನ ಶ್ರೀ ವಿಜಯಾ ಅಂಗ್ಲ ಮಾಧ್ಯಮ ಶಾಲೆ, ಸಾಧನಾ ದೇವಾಡಿಗ ಉಡುಪಿ ಎಕ್ಸಲೆಂಟ್ ಪಿ ಕಾಲೇಜು ಸಣ್ಣಾರೆ, ಶ್ರೀನಿಧಿ ಪಿ.ಎಸ್. ದಕ್ಷಿಣಕನ್ನಡ, ಎಸ್.ವಿ.ಎಸ್. ಆಂಗ್ಲಮಾಧ್ಯಮ ಶಾಲೆ, ಬಂಟ್ವಾಳ ಕ್ರಮವಾಗಿ ಸ್ಥಾನ ಪಡೆದುಕೊಂಡರು.
ಪಿಯುಸಿಗೆ ನಡೆದ ಜ್ಞಾನ ಗಣ ಕಂಠಪಾಠ ಸ್ಪರ್ಧೆಯಲ್ಲಿ ಕ್ರಮವಾಗಿ ಮೂರು ಸ್ಥಾನ ಹಂಚಿಕೊಂಡಿದ್ದಾರೆ. ಎಸ್. ಕೀರ್ತನಾ ಶೆಣೈ ದಕ್ಷಿಣಕನ್ನಡ ಕೆನರಾ ಪಿ.ಯು. ಕಾಲೇಜು, ಮಂಗಳೂರು, ಕೆ. ಎನ್. ಕೀರ್ತಿ ಉತ್ತರಕನ್ನಡ ಶ್ರೀದೇವಿ ಪಿ.ಯು.ಕಾಲೇಜು, ವಿಕಾಸ್ ಹೆಗಡೆ ಬೆಂಗಳೂರು ಪ್ರೆಸಿಡೆನ್ಸಿ ಪಿ.ಯು. ಕಾಲೇಜು ಪಡೆದಿದ್ದಾರೆ ಎಂದು ಶ್ರೀ ಮಠದ ಪ್ರಕಟನೆ ತಿಳಿಸಿದೆ.
ಶ್ರೀಗಳ ಅಭಿನಂದನೆ: ಭಗವದ್ಗೀತಾ ಅಭಿಯಾನ ನಡೆಸಿದ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಶುಭಾಶೀರ್ವಾದ ನೀಡಿದ್ದಾರೆ.