ಶಿರಸಿ: ತಾಲೂಕಿನ ನರೇಬೈಲ್ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭೂಮಿಪುತ್ರಿ ಮತ್ತು ಅರೇಕಾಪೋಟ್ ಸಂಸ್ಥೆಗಳ ಸಹಯೋಗದಲ್ಲಿ ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಶಿರಸಿ ಇವರು ಸಂಘಟಿಸಿದ್ದ `ಕೈದೋಟ’ ಕಲಿಕೆಗಳ ಆಗರ ಈ ಕಾರ್ಯಕ್ರಮದ ವಿಷ್ಲೇಷಣೆ ನಡೆಯಿತು.
ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಕುತೂಹಲ ಹುಟ್ಟಿಸುವ ಉದ್ದೇಶದೊಂದಿಗೆ ಶಶಿಧರ್ ಭಟ್ ದೆಹಲಿ ಈ ಯೋಜನೆಯನ್ನು ರೂಪಿಸಿದ್ದು ಪ್ರತೀ ವಿದ್ಯಾರ್ಥಿಗೂ ಅಡಿಕೆಮರದಿಂದ ತಯಾರಿಸಿದ ಒಂದು ಕುಂಡವನ್ನು ನೀಡಿ ಆ ಕುಂಡದಲ್ಲಿ ವಿದ್ಯಾರ್ಥಿಯು ಗಿಡ ಬೆಳಸಿ 21 ವಾರಗಳ ಕಾಲ ಪೋಷಿಸುವ ಸ್ಫರ್ದೆ ನಡೆಸಿದ್ದರು. ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ ಅವರು ಮಕ್ಕಳಲ್ಲಿ ಕೈದೋಟದ ಬಗ್ಗೆ ಆಸಕ್ತಿ ಮೂಡಬೇಕು ಎಂದರು. ಎಲ್ಲಾ ವಿದ್ಯಾರ್ಥಿಗಳು ಗಿಡ ಬೆಳಸಿದ ಕುರಿತು ವಿಡಿಯೋ ಮತ್ತು ಬರವಣಿಗೆ ಮಾಡಿದುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ತಾವು ಬೆಳಸಿದ ಗಿಡಗಳ ಕುರಿತು ಅನುಭವ ಹಂಚಿಕೊಂಡರು. ಕಾರ್ಯದರ್ಶಿ ಎಲ್ ಎಂ ಹೆಗಡೆ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಭಾರತಿ ಭಟ್ ಸ್ವಾಗತಿಸಿದರು.