ಯಲ್ಲಾಪುರ: ರಾಜ್ಯದ ಧನಗರ ಗೌಳಿ ಸಮುದಾಯದವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಸುವರ್ಣಸೌಧದಲ್ಲಿ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರ ನೇತೃತ್ವದ ನಿಯೊಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಸಚಿವರಾದ ಶಿವರಾಮ ಹೆಬ್ಬಾರ್ ಅವರು, ಉತ್ತರಕನ್ನಡ ಮತ್ತು ಧಾರವಾಡ ಜಿಲ್ಲೆಯಲ್ಲಿ ಪಶುಪಾಲನೆ ಪಾರಂಪರಿಕ ಮೂಲಕಸುಬು ಹೊಂದಿರುವ ಧನಗರ ಗೌಳಿ ಸಮುದಾಯವು ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಬೇಕಾಗಿರುವ ಎಲ್ಲಾ ಬುಡಕಟ್ಟು ಲಕ್ಷಣವನ್ನು ಈ ಸಮುದಾಯದ ಹೊಂದಿದೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.
ನಂತರ ಸಮಾಜ ಕಲ್ಯಾಣ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಕಾನೂನು ಸಂಸದೀಯ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.ಈ ವೇಳೆ ವಿಧಾನಪರಿಷತ ಸದಸ್ಯರಾದ ಶಾಂತಾರಾಮ ಸಿದ್ದಿ, ಧನಗರ ಗೌಳಿ ಸಮುದಾಯದ ಪ್ರಮುಖರಾದ ದೇವು ಪಾಟೀಲ್, ದೊಂಡು ಪಾಟೀಲ್ ಹಾಗೂ ಪ್ರಮುಖರು ಇದ್ದರು.