ಯಲ್ಲಾಪುರ: ಭಕ್ತಿ ಇರುವಲ್ಲಿ ಶಕ್ತಿ ಇರಬಲ್ಲದು. ಸಮಾಜದಲ್ಲಿ ಶಾಂತಿಯೂ ಇರಬೇಕಾದರೆ ಊರಿನಲ್ಲಿ ಶೃದ್ಧಾಕೇಂದ್ರಗಳಿರಬೇಕು ಎಂದು ಧಾತ್ರಿ ಫೌಂಡೇಶನ್’ನ ಸಂಸ್ಥಾಪಕ ಶ್ರೀನಿವಾಸ ಭಟ್ಟ ಯಲ್ಲಾಪುರ ಹೇಳಿದರು.
ಅವರು ತಾಲೂಕಿನ ಬೀಗಾರಿನ ಲಕ್ಷ್ಮೀ ನರಸಿಂಹ ದೇವಸ್ಥಾನದ ನೂತನ ಶಿಲಾಮಯ ಕಟ್ಟಡದ ನಿರ್ಮಾಣ ಕಾರ್ಯ ವೀಕ್ಷಿಸಿ ಮಾತನಾಡುತ್ತಿದ್ದರು. ದೇವಾಲಯಗಳು ಆರಾಧನಾ ಸ್ಥಳವಾಗಿವೆ. ನೆಮ್ಮದಿಯ ತಾಣವಾಗಿವೆ. ಸ್ವರ್ಣವಲ್ಲಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಬೀಗಾರಿನ ಈ ದೇವಸ್ಥಾನ ಶಾಸ್ತ್ರೀಯವಾಗಿ ಕಟ್ಟಡ ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರ ಇದೇ ಸಂದರ್ಭದಲ್ಲಿ ದೇವಾಲಯದ ಮುಖ ಮಂಟಪಕ್ಕೆ ಧಾತ್ರಿ ಫೌಂಡೇಶನ್ ನಿಂದ 3 ಲಕ್ಷದ 80 ಸಾವಿರ ರೂ. ದೇಣಿಗೆಯ ಚೆಕ್ ನೀಡಿದರು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ನಾರಾಯಣ ಹೆಗಡೆ ಸುರ್ಗಿಮನೆ, ಗೌರವಾಧ್ಯಕ್ಷ ಎಸ್ ಎನ್ ಗಾಂವಾರ ಬೆಳ್ಳಿಪಾಲ ಮತ್ತು ಆಡಳಿತ ಮಂಡಳಿಯ ಸದಸ್ಯರು ಇದ್ದರು.