ಕಾರವಾರ: ಜಿಲ್ಲೆಯ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆ ಸದಸ್ಯ ಸ್ಥಾನಗಳಿಗೆ ಡಿ.27 ರಂದು ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಡಗೇರಿ, ಘಾಡಸಾಯಿ, ದೇವಳಮಕ್ಕಿ, ಗೋಟೆಗಾಳಿ, ವಾಲಗಳ್ಳಿ, ಚೆಂದಾವರ, ಮುಗ್ಗಾ, ಅಂಡಗಿ, ಯಡೋಗಾ, ಕಾತೇಲಿ, ಗ್ರಾಮ ಪಂಚಾಯತ ಹಾಗೂ ನಗರ ಸ್ಥಳೀಯ ಸಂಸ್ಥೆಗಳಾದ ಜಾಲಿ, ದಾಂಡಲಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಮತದಾನವು ಶಾಂತಿಯುತವಾಗಿ ನಡೆಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಡಿ.26 ಸಂಜೆ 5ಗಂಟೆಯಿಂದ 27 ಸಂಜೆ 5 ಗಂಟೆಯ ವರೆಗೆ ಮದ್ಯ ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.