ಶಿರಸಿ: ಬೆಟ್ಟ ಪ್ರದೇಶದಲ್ಲಿ ಸ್ಮಶಾನ ಗುರುತಿಸಲು ಅವಕಾಶ ನೀಡದಂತೆ ನಿರ್ದೇಶನ ನಿಡಬೇಕೆಂದು ಜಿಪಂ ಮಾಜಿ ಸದಸ್ಯ ಜಿ ಎನ್ ಹೆಗಡೆ ಮುರೇಗಾರ ಕಂದಾಯ ಮಂತ್ರಿ ಆರ್. ಅಶೋಕ, ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಮ ಹೆಬ್ಬಾರ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಮತ್ತು ಸಾಂಬಾ ಬೆಳೆ ಸಂಬಂಧ ಬೆಟ್ಟ ಪ್ರದೇಶವನ್ನು ಭಾಗಾಯತದ ಉತ್ತಮ ಸಾಗುವಳಿಗೆ ಬಿಟ್ಟಿದ್ದು ಇದೆ. ರೈತರು ಸದರಿ ಬೆಟ್ಟವನ್ನು ಅತ್ಯುತ್ತಮವಾಗಿ ಸಾಗುವಳಿ ಮಾಡಿ ಬರುತ್ತಿದ್ದಾರೆ. ಹೀಗಿರುವಲ್ಲಿ ಹೀಪನಳ್ಳಿ ಹಾಗೂ ಶಿರಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಮಶಾನ ಗುರುತಿಸಬೇಕೆಂತಾ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಿದ್ದಾಗಿ ತಿಳಿದು ಬಂದಿದೆ.
ಬೆಟ್ಟ ಪ್ರದೇಶದಲ್ಲಿ ಸ್ಮಶಾನವನ್ನು ಗುರುತಿಸಿದಲ್ಲಿ ಆಯಾ ಪ್ರದೇಶದ ಬೆಟ್ಟ ಸಾಗುವಳಿದಾರರಿಗೆ ಯಾ ರೈತರಿಗೆ ತುಂಬಾ ತೊಂದರೆ ಹಾಗೂ ಲುಕ್ಸಾನು ಸಂಭವಿಸುತ್ತದೆ. ಕಾರಣ ತಾವು ಸಂಬಂಧಿಸಿದ ಅಧಿಕಾರಿಗಳಿಗೆ ಬೆಟ್ಟ ಪ್ರದೇಶವನ್ನು ಸ್ಮಶಾನವಾಗಿ ಪರಿವರ್ತಿಸಲು ಅವಕಾಶ ನೀಡದಂತೆ ನಿರ್ದೇಶನ ನೀಡಲು ವಿನಂತಿಸಿದ್ದಾರೆ.