• first
  second
  third
  previous arrow
  next arrow
 • ಶ್ರೀ ಶಂಕರ ನಾರಾಯಣ ದೇವರಿಗೆ ವಿಜೃಂಭಣೆಯ ದೀಪೋತ್ಸವ

  300x250 AD

  ಶಿರಸಿ: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಸುಧಾಪುರ ಕ್ಷೇತ್ರದ ಐತಿಹಾಸಿಕ ಸೋದೆ ಅರಸರ ಕಾಲದಲ್ಲಿ ಕರಿ ಕಲ್ಲಿನಿಂದ ಕಟ್ಟಿದ ಅಪರೂಪದ ಶಿಲಾ ಕೆತ್ತನೆಗಳಿಂದ ಕಂಗೊಳಿಸುತ್ತಿರುವ ದೇಗುಲವೇ `ಶ್ರೀ ಶಂಕರ ನಾರಾಯಣ’.


  ಮಠದೇವಳ ಗ್ರಾಮದ ಹಳೇಯೂರು ಮಜರೆಯಲ್ಲಿರುವ ಈ ಬೃಹತ್ ಶಿಲಾ ದೇಗುಲವನ್ನು ಸಂಪೂರ್ಣ ಜೀಣೋದ್ಧಾರ ಮಾಡಿ 2004 ರಲ್ಲಿ ಶ್ರೀ ಶಂಕರ ಮತ್ತು ಶ್ರೀ ನಾರಾಯಣ ದೇವರುಗಳನ್ನು ಪುನರ್ ಪ್ರತಿಷ್ಠೆ ಮಾಡಲಾಗಿದೆ. ಇದರಲ್ಲಿ ಒಂದೇ ಸಭಾ ಮಂಟಪ- ಅಂತರಾಳವಿದ್ದರೂ ಗರ್ಭಗುಡಿ ಮಾತ್ರ ಎರಡಿದೆ. ಇದರಲ್ಲಿ ಒಂದು ಶ್ರೀ ಶಂಕರ ದೇವರ ಗರ್ಭಗುಡಿಯಾದರೇ ಮತ್ತೊಂದು ಶ್ರೀ ನಾರಾಯಣ ದೇವರ ಗರ್ಭಗುಡಿಯಾಗಿದೆ. ಹಿಂದಿನಿಂದಲೂ ಇಲ್ಲಿ ಮಾರ್ಗಶಿರ ಶುಕ್ಲ ಪಕ್ಷದ ಹುಣ್ಣಿಮೆಯಂದು ಊರವರೆಲ್ಲ ಸೇರಿ ದೀಪೋತ್ಸವ ನಡೆಸುತ್ತಿದ್ದರು.

  300x250 AD

  ಸೋಂದಾ ಜಾಗೃತ ವೇದಿಕೆ(ರಿ) ಯು ಈ ಭಾಗದ ನಾಗರೀಕರೊಂದಿಗೆ ಸೇರಿ ಡಿ.19 ರವಿವಾರ ಸಂಜೆ 6;30 ಕ್ಕೆ ವಿದ್ವಾನ್ ನಾರಾಯಣ ಶಾಸ್ತ್ರಿಗಳು ಸದಾಶಿವ ದೇವಸ್ಥಾನ ಇವರ ಆಚಾರ್ಯತ್ವದಲ್ಲಿ ಗೋಪಾಲ ಹೆಗಡೆ ಹಳೇಯೂರು ಇವರ ಯಜಮಾನಿಕೆಯಲ್ಲಿ ಶ್ರೀ ದೇವರುಗಳಿಗೆ ದೀಪೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ಪೂಜಾ ಕೈಂಕರ್ಯದಲ್ಲಿ ಸುಬ್ರಾಯ ಜೋಶಿ ಸಂಪೇಸರ ಸಹಕರಿಸಿದರು.


  ಈ ವೇಳೆ ಜಾಗೃತ ವೇದಿಕೆಯ ಕಾರ್ಯಧ್ಯಕ್ಷ ರತ್ನಾಕರ ಹೆಗಡೆ ಬಾಡಲಕೊಪ್ಪ, ಕಾರ್ಯದರ್ಶಿ ಶ್ರೀಧರ ಹೆಗಡೆ ಗುಡ್ಡೇಮನೆ, ಸದಸ್ಯ ಸತ್ಯನಾರಾಯಣ ಹೆಗಡೆ ಹಳೇಯೂರು, ಮಾಬ್ಲೇಶ್ವರ ಹೆಗಡೆ ಬಂಧೀಸರ, ಸೋಂದಾ ಕಸಬಾ ಮಾತೃ ಮಂಡಳದ ಅಧ್ಯಕ್ಷೆ ಸ್ವಾತಿ ಪರಾಂಜಪೆ ತೇರಬೀದಿ, ಹಳೇಯೂರು ತೇರಬೀದಿ-ವಾಜಗದ್ದೆ -ದೂಪದಹೊಂಡ ಭಾಗದ ನಾಗರೀಕ ಬಂಧು-ಭಗೀನಿಯರು ಹಾಗೂ ದೇವಳದ ಎಲ್ಲ ಗೌರವ ಅರ್ಚಕರುಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.

  Share This
  300x250 AD
  300x250 AD
  300x250 AD
  Back to top