ಶಿರಸಿ: ಯಲ್ಲಾಪುರ ಮಾರ್ಗದಿಂದ ಶಿರಸಿಗೆ ಗಾಂಜಾ ಸಾಗಾಟ ಮಾಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಓರ್ವನನ್ನು ಬಂಧಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಪರಶುರಾಮ ಕೃಷ್ಣ ಸಿದ್ಧಿ (27) ಬಂಧಿತ ಆರೋಪಿ. ಯಲ್ಲಾಪುರ ಕಡೆಯಿಂದ ಶಿರಸಿ ಬರುವ ಸಂದರ್ಭದಲ್ಲಿ ದೇವನಿಲಯ ಸಮೀಪ ಆರೋಪಿಯನ್ನು ಮಾಲು ಸಮೇತ ಬಂಧಿಸಿ, 234 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಗಾಂಜಾ 6000 ಸಾವಿರ ರೂಪಾಯಿ ಮೌಲ್ಯ ಹೊಂದಿರಬಹುದೆಂದು ಅಂದಾಜಿಸಲಾಗಿದೆ. ಬಂಧಿತನಿಂದ ಗಾಂಜಾ ಸಾಗಾಟಕ್ಕೆ ಬಳಸಿದ 15,000 ಬೆಲೆಯ ಹೊಂಡಾ ಕಂಪನಿ ಬೈಕ್ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು, ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರವಿ ನಾಯ್ಕ ಡಿ.ಎಸ್.ಪಿ ರವರ ಮಾರ್ಗದರ್ಶನದಲ್ಲಿ ರಾಮಚಂದ್ರ ನಾಯಕ ಸಿ.ಪಿ.ಐ ಮತ್ತು ಪಿ.ಎಸ್.ಐ ಈರಯ್ಯ ಡಿ. ಎನ್. ಶಿರಸಿ ಗ್ರಾಮೀಣ ಠಾಣೆ ರವರ ತಂಡ ದಾಳಿ ಮಾಡಿ ಆರೋಪಿತನನ್ನು ದಸ್ತಗಿರಿಮಾಡಿ ಆರೋಪಿತನಿಂದ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ದಾಳಿಯಲ್ಲಿ ಪ್ರೋಬೇಷನರಿ .ಪಿ.ಎಸ್.ಐ ಕೌಶೀಕ್ ಐ.ಸಿ ಶಿರಸಿ ಗ್ರಾಮೀಣ ಠಾಣೆ, ಪಿ.ಎಸ್.ಐ ಭೀಮಾಶಂಕರ ಮಾರುಕಟ್ಟೆ ಠಾಣಿ, ಪಿ.ಎಸ್.ಐ ರಾಜಕುಮಾರ ಉಕ್ಕಳ್ಳಿ ಶಿರಸಿ ನಗರ ಠಾಣೆ, ಪಿ.ಎಸ್.ಐ ಹಣಮಂತ ಬಿರಾದರ ಬನವಾಸಿ ಠಾಣೆ, ಶಿರಸಿ ಗ್ರಾಮೀಣ ಪೆÇಲೀಸ್ ಠಾಣಿ ಸಿಬ್ಬಂದಿಗಳಾದ ಪ್ರದೀಪ ರೇವಣಕರ, ಸಂಗಪ್ಪ ಆರ್.ಹೆಚ್.ಗಣಪತಿ ನಾಯ್ಕ, ಸುನೀಲ ಹಡಲಗೆ, ಮಾಹಾದೇವಪ್ಪ ನಿರೋಳ್ಳಿ, ಜಮ್ಮು ಘಾಟು ಶಿಂಧೆ, ಶಿರಸಿ ನಗರ ಠಾಣೆ ಸಿಬ್ಬಂದಿ ಪ್ರಶಾಂತ ಪಾವುಸ್ಕರ, ಬನವಾಸಿ ಠಾಣಿ ಸಿಬ್ಬಂದಿ ಚಂದ್ರಪ್ಪ ಕೊರವರ, ಜೀಪ್ ಚಾಲಕರಾದ ಪಾಂಡು, ರೇವಣಕರ, ಶ್ರೀಧರ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.