ಶಿರಸಿ: ವಿದ್ಯಾಲಯ ಎಂದರೆ ಮಂದಿರವಿದ್ದಂತೆ. ಅಲ್ಲಿನ ಪರಿಸರ ಸ್ವಚ್ಚ ಹಾಗೂ ಸುಂದರದಿಂದ ಕೂಡಿದ್ದಾಗ ಮಾತ್ರ ಅಲ್ಲಿ ವಿದ್ಯಾ ಮಾತೆಯನ್ನು ನಾವು ಕಾಣಬಹುದು.ಸ್ವಚ್ಚತೆಯೆ ನಮ್ಮ ಉಸಿರಾದಾಗ ಮಾತ್ರ ನಮ್ಮ ಜೀವನ ಹಸಿರಾಗುವದು. ನಮ್ಮ ಮನೆ ಮನದಲ್ಲಿ ಸ್ವಚ್ಚತೆಯ ಭಾವ ಮೂಡಬೇಕು ಸ್ವಚ್ಚ ಭಾರತ ಸುಂದರ ಭಾರತ ಮಾಡಬಹುದು ಎಂದು ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಸತೀಶ ನಾಯ್ಕ ಹೇಳಿದರು.
ಅವರು ಅವರು ನಮ್ಮ ಕಾಲೇಜ್ ಸ್ವಚ್ಚ ಕಾಲೇಜ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡುತ್ತಾ ದೇಶದ ಅಭಿವೃದ್ಧಿಗೆ ಸ್ವಚ್ಚತೆಯು ಬಹಳ ಮುಖ್ಯವಾಗಿದೆ. ಇಂದಿನ ಪ್ಲಾಸ್ಟಿಕ ಯುಗದಲ್ಲಿ ನಾವು ಬಹಳ ಜಾಗರೂಕರಾಗಬೇಕಾಗಿದೆ. ಪ್ಲಾಸ್ಟಿಕ್ ಪರಿಸರಕ್ಕೆ ಅಪಾಯಕಾರಿಯಾಗಿದ್ದು ಇದರ ಬಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕಾಲೇಜಿನ ಆವಾರವನ್ನು ಎನ್.ಎಸ್.ಎಸ್ ಸ್ವಯಂಸೇವಕರು ಪಾಲ್ಗೊಂಡು ಪೂರ್ಣ ಸ್ವಚ್ಚಗೊಳಿಸಿದರು. ವಿದ್ಯಾರ್ಥಿ ಪ್ರಮುಖ ಚೇತನ ನಾಯ್ಕ ಸ್ವಯಂ ಸೇವಕ ನೇತೃತ್ವ ವಹಿಸಿದ್ದರು.