ಶಿರಸಿ: ಮನೆಯಿಂದ ಕಾಲೇಜಿಗೆ ತೆರಳುತ್ತೇನೆಂದು ಹೊರಟ ನಗರದ ನಿಲೇಕಣಿ ಕಾಲೇಜಿಗೆ ಹೊರಟ ಬಾಲಕಿ ನಾಪತ್ತೆಯಾದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ನಿಲೇಕಣಿ ಕಾಲೇಜಿನ ವಿದ್ಯಾರ್ಥಿ ಮನೆಯಿಂದ ಕಾಲೇಜಿಗೆಂದು ಹೊರಟಿದ್ದಳು. ಆಗ ಕಾರಿನಲ್ಲಿ ಬಂದ ಆರೋಪಿಗಳು ಆಕೆಯನ್ನು ಪುಸಲಾಯಿಸಿ ಅಪಹರಣ ಮಾಡಿರುವುದಾಗಿ ಪ್ರಕರಣ ದಾಖಲಾಗಿದೆ. ಜಬ್ಬಿವುಲ್ಲಾ ಶುಕುರಸಾಬ್ ಧಾರವಾಡಕರ (22) ವರ್ಷದ ಎಂಬಾತನೇ ಕಿಡ್ನ್ಯಾಪ್ ಮಾಡಿದ ಆರೋಪಿ. ಈತನ ವಿರುದ್ಧ ಬಾಲಕಿಯ ಪಾಲಕರು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣ ದಾಖಲಿಸಿದ್ದು, ಪಿಎಸೈ ಮೋಹಿನಿ ಶೆಟ್ಟಿ ತನಿಖೆ ಕೈಗೊಂಡಿದ್ದಾರೆ.