ಶಿರಸಿ: ಬೆಂಗಳೂರಿನ ಐಕಾನ್ ಆಪ್ ಇಂಡಿಯನ್ ಬಿಜಿನೆಸ್ ಸಂಸ್ಥೆ ಮಹಿಳೆಯರ ವಿಭಾಗದಲ್ಲಿ ನವೋದ್ಯಮಿ, ಕಾಂಫಿ ಕಪ್ ಸಂಸ್ಥಾಪಕಿ ದಿವ್ಯ ಗೋಕರ್ಣಗೆ ವರ್ಷದ ‘ಹೆಣ್ಣು ಮಕ್ಕಳ ಆರೋಗ್ಯ ಮತ್ತು ನೈರ್ಮಲ್ಯ ರಾಯಭಾರಿ’ ಪ್ರಶಸ್ತಿ ಕೊಟ್ಟು ಗೌರವಿಸಿದೆ.
ಶಿರಸಿಯಲ್ಲಿ ಪುಟ್ಟದಾಗಿ ಆರಂಭಿಸಿದ ದಿವಾ ಟ್ರೇಡಿಂಗ್ ಕಂಪನಿಯ ಬ್ರಾಂಡ್’ಗಳಾದ ಕಾಂಫಿ ಕಪ್ ಮತ್ತು ಕಾಂಫಿ ಕಾಟನ್ ಫ್ರೇಶ್ ಹೆಸರಿನಲ್ಲಿ ಮುಟ್ಟಿನ ಕಪ್ ಮತ್ತು ಮರುಬಳಸಬಹುದಾದ ಮುಟ್ಟಿನ ಪ್ಯಾಡ್ ತಯಾರಿಸುತ್ತಿದ್ದು ಈ ಹೊಸ ಉದ್ಯಮ ಗುರುತರವಾಗಿದೆ. MSME ವಿಭಾಗದಲ್ಲಿ ಮಾರಾಟ ಮತ್ತು ವ್ಯವಹಾರದಲ್ಲೂ ಗುರುತರ ಸಾಧನೆ ಜೊತೆ ದಿವ್ಯಾ ಗೋಕರ್ಣ ಮತ್ತು ಅವರ ತಂಡ ಮುಟ್ಟು ನೈರ್ಮಲ್ಯ ಮತ್ತು ನಿರ್ವಹಣೆ ಕುರಿತಂತೆ ಕರ್ನಾಟಕದ ಎಂಬತೈದಕ್ಕೂ ಹೆಚ್ಚು ಹಳ್ಳಿಗಳಲ್ಲಿ ಉಚಿತ ಮಾಹಿತಿ ಕಾರ್ಯಾಗಾರ ಕೈಗೊಂಡಿದ್ದು ವರ್ಷದ ಅವಧಿಯಲ್ಲಿ ಹದಿನಾರು ಸಾವಿರಕ್ಕೂ ಹೆಚ್ಚು ಜನರಿಗೆ ಮಾಹಿತಿ ತಲುಪಿಸಿದೆ. ದಿವ್ಯ ಗೋಕರ್ಣರ ಈ ಸಾಧನೆ ಗುರುತಿಸಿ MSME Innovation ಮತ್ತು leadership award ಕೊಟ್ಟು ಗೌರವಿಸಿಲಾಗಿದೆ.