• Slide
  Slide
  Slide
  previous arrow
  next arrow
 • ಹೊಸ ವರ್ಷಾಚರಣೆ ಪಾರ್ಟಿ ನಿಷೇಧಕ್ಕೆ ಆಗ್ರಹ; ಪೊಲೀಸರಿಗೆ ಮನವಿ

  300x250 AD


  ಭಟ್ಕಳ: ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹೊಸ ವರ್ಷಾಚರಣೆಯ ನೆಪದಲ್ಲಿ ಡಿಸೆಂಬರ್ 31 ರ ರಾತ್ರಿ ಮುರುಡೇಶ್ವರದ ಸುತ್ತಮುತ್ತ ಹೊಸ ವರ್ಷಾಚರಣೆ ಮತ್ತು ಪಾರ್ಟಿಗಳನ್ನು ನಿಷೇಧಿಸಲು ಆಗ್ರಹಿಸಿ ಮನವಿ ನೀಡಿದರು.


  ಮನವಿಯಲ್ಲಿ ದೇಶದಾದ್ಯಂತ ಹೆಚ್ಚುತ್ತಿರುವ ಪಾಶ್ಚಾತ್ಯ ಕೆಟ್ಟ ರೂಢಿಗಳ ಅಂಧಾನುಕರಣೆಯಿಂದಾಗಿ ಹೊಸ ವರ್ಷದ ಹೆಸರಿನಲ್ಲಿ ಡಿಸೆಂಬರ್ 31 ರ ಮಧ್ಯರಾತ್ರಿ ಧೂಮಪಾನ, ಮದ್ಯಪಾನ, ಅಮಲು ಪದಾರ್ಥಗಳ ಸೇವನೆ, ಪಾರ್ಟಿಗಳ ಆಯೋಜನೆ ಮಾಡುವುದು ಹೆಚ್ಚಾಗಿರುತ್ತದೆ ಮತ್ತು ಈ ರಾತ್ರಿ ಮದ್ಯಪಾನ ಮಾಡಿ ಅತಿವೇಗದಿಂದ ವಾಹನಗಳನ್ನು ಓಡಿಸುವುದು ಹೆಚ್ಚಾಗಿದ್ದು, ಇವರಲ್ಲಿ ಸಣ್ಣವಯಸ್ಸಿನ ಯುವಕರು, ಯುವತಿಯರು ಮತ್ತು ಮಹಿಳೆಯರು ಸಹ ಇರುತ್ತಾರೆ. ಇದಲ್ಲದೇ ಇಂತಹ ಸಮಯದಲ್ಲಿ ಅನೇಕ ಮಹಿಳೆಯರ ಲೈಂಗಿಕ ಕಿರುಕುಳ, ಅತ್ಯಾಚಾರ ಮುಂತಾದ ಘಟನೆಗಳು ನಡೆಯುತ್ತಿದೆ. ರಾತ್ರಿ ಜನರು ಸೇರಿ ಹೊಸ ವರ್ಷದ ಸಂಭ್ರಮಾಚರಣೆ ಹೆಸರಿನಲ್ಲಿ ಮದ್ಯಪಾನ ಮಾಡುವುದು ಮುಂತಾದ ಕೃತಿಗಳು ನಡೆಯುತ್ತದೆ.


  ಈಗ ಕೊರೋನಾ ಮಹಾಮಾರಿಯು 3ನೇ ಅಲೆ ಬರುವ ಸಾಧ್ಯತೆ ಇದೆ. ಹೀಗಿರುವಾಗ ಡಿಸೆಂಬರ್ 31 ರಂದು ಆಚರಿಸಲಾಗುವ ಪಾರ್ಟಿಯಿಂದ ಕೊರೋನಾದ ಸೊಂಕು ಹೆಚ್ಚು ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ಸಾರ್ವಜನಿಕರ ಆರೋಗ್ಯವನ್ನು ಅಪಾಯಕ್ಕೀಡು ಮಾಡುವುದು ಯೊಗ್ಯವಲ್ಲ. ಇದಲ್ಲದೇ 31 ಡಿಸೆಂಬರ್‍ನಂದು ನಗರದಲ್ಲಿರುವ ಕೋಟೆಗಳು, ಪ್ರವಾಸಿತಾಣಗಳು, ಐತಿಹಾಸಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮ್ರಪಾನ ಹಾಗೂ ಮಧ್ಯ ಸೇವನೆಯನ್ನು ಮಾಡುವುದು ಪಾರ್ಟಿಗಳನ್ನು ಮಾಡುವುದರ ಮೇಲೆ ನಿಷೇಧ ಹೇರುವಂತೆ ಆದೇಶವನ್ನು ನೀಡಬೇಕು. ಜೊತೆಗೆ ಇಂತಹ ಸ್ಥಳಗಳಲ್ಲಿ ಕಾನೂನು-ಸುವ್ಯವಸ್ಥೆಯನ್ನು ಕಾಪಾಡಲು ಪೆÇಲೀಸ್ ದಳವನ್ನು ನೇಮಿಸಬೇಕು ಎಂದು ಆಗ್ರಹ ಮಾಡಲಾಯಿತು.

  300x250 AD


  ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸಮನ್ವಯಕ ಶರತ ಕುಮಾರ ನಾಯ್ಕ್, ಶ್ರೀ ರಾಮಸೇನೆ ರಾಜ್ಯ ಉಪಾಧ್ಯಕ್ಷ ಜಯಂತ್ ನಾಯ್ಕ್, ಕಾರವಾರ ಜಿಲ್ಲಾ ಅಧ್ಯಕ್ಷ ರಾಜು ನಾಯ್ಕ್, ರಾಮಸೇನೆ ಕಾರ್ಯಕರ್ತ ರಾಮಣ್ಣ, ಶ್ರೀಧರ ಹರಿಕಾಂತ್, ಕೃಷ್ಣ ನಾಯ್ಕ್ ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top