ಶಿರಸಿ: ನಗರದ ನಿಲೇಕಣಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕ್ಲಾಸಿನಲ್ಲಿಯೂ ಮೊಬೈಲ್ ಬಳಕೆ ಮಾಡುತ್ತಿದ್ದು, ಪ್ರಾಂಶುಪಾಲರು ದಿಢೀರ್ ಭೇಟಿ ನೀಡಿ ಸುಮಾರು 400ಕ್ಕೂ ಹೆಚ್ಚು ಮೊಬೈಲ್’ಗಳನ್ನು ವಶಕ್ಕೆ ಪಡೆದಿದ್ದಾರೆ.
ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ರಿಂಗಣಿಸಿದ್ದು, ಪ್ರಾಂಶುಪಾಲರು, ಉಪನ್ಯಾಸಕರು ದಿಢೀರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಮಯದಲ್ಲಿ ವಿದ್ಯಾರ್ಥಿಗಳ ಬ್ಯಾಗ್’ನಲ್ಲಿ ಸಿಗರೇಟ್ ಪ್ಯಾಕೇಟ್, ಲೈಟರ್ ಸಹ ಪತ್ತೆಯಾಗಿದೆ. ಆಫ್’ಲೈನ್ ಕ್ಲಾಸಿಗೆ ಬರುವಾಗಲೂ ಸಿಕ್ಕಾಪಟ್ಟೆ ಮೋಜಿನಲ್ಲಿ ವಿದ್ಯಾರ್ಥಿಗಳು ಮುಳುಗಿದ್ದಾರೆ. ಅಲ್ಲದೇ ಸಿಗರೇಟ್ ಧಮ್ ಎಳೆಯುತ್ತಿದ್ದಾರೆ. ಪ್ರಾಂಶುಪಾಲರು, ಉಪನ್ಯಾಸಕರಿಂದ ಕಟ್ಟು ನಿಟ್ಟಿನ ಕ್ರಮದ ಸುದ್ದಿ ತಿಳಿದು ನಗರಠಾಣೆ ಪೊಲೀಸರು ಕಾಲೇಜಿಗೆ ಆಗಮಿಸಿದ್ದು, ಕಾಲೇಜು ಪ್ರಾಚಾರ್ಯ ನರೇಂದ್ರ ನಾಯಕ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.