ಶಿರಸಿ: ಜಿಲ್ಲೆಯಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಮಾರಾಟ ಹಾಗೂ ಅದಕ್ಕೆ ಸಂಬಂಧಪಟ್ಟ ಯಾವುದೇ ಮಾದಕ ವಸ್ತುಗಳ ಸಾಗಾಟ ನಡೆಸಿದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕೈಗೊಳ್ಳಲಾಗುವುದು ಅಂತಹ ಮಾಹಿತಿ ಯಾರು ಬೇಕಾದರೂ ನೀಡಬಹುದು. ಮಾಹಿತಿ ನೀಡಿದವರ ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗ ಪಡಿಸುವುದಿಲ್ಲ. ಆದರೆ ಮಾಹಿತಿ ನಿಖರ ಮತ್ತು ಸ್ಪಷ್ಟತೆಯಿಂದ ಕೂಡಿರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೆಕರ ಅವರು ತಿಳಿಸಿದರು.
ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಇತ್ತಿಚ್ಚಿನ ದಿನಗಳಲ್ಲಿ ಯುವಜನರು ಮಾದಕ ವೆಸನಿಗಳಾಗುತ್ತಿರುವ ಬಗ್ಗೆ ಚರ್ಚಿಸಿದಾಗ ಈ ಅಂಶವನ್ನು ಪ್ರಕಟಿಸಿದರು. ಖಚಿತ ಮಾಹಿತಿ ನೀಡಿದವರಿಗೆ ಯೋಗ್ಯ ಬಹುಮಾನವನ್ನು ಸಹ ಪೊಲೀಸ್ ಇಲಾಖೆಯಿಂದ ನೀಡಲಾಗುತ್ತದೆ ಎಂದಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಹಿಳೆಯರು ಮತ್ತು ಮಕ್ಕಳ ವಿಷಯದ ಕುರಿತು ಕಾರ್ಯಾಗಾರಗಳನ್ನು ಸಹ ನಡೆಸಲಾಗುತ್ತಿದೆ. ಇದರಿಂದ ಮಕ್ಕಳ ಸಾಗಾಣಿಕೆ ಹಾಗೂ ಮಹಿಳೆಯರ ರಕ್ಷಣೆ ಬಗ್ಗೆ
ಜಾಗೃತಿವಹಿಸಲು ಸಾಧ್ಯವಾಗುತ್ತದೆ ಎಂದರು.
ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಹಂತ ಹಂತವಾಗಿ ನೀಗಿಸಿಕೊಳ್ಳಲಾಗುತ್ತಿದೆ. ಯಾವುದೇ ಠಾಣೆಯಲ್ಲಿ 5 ವರ್ಷಕ್ಕಿಂತ ಹೆಚ್ಚಿನ ಅವಧಿ ಸೇವೆಯಲ್ಲಿದ್ದವರನ್ನು ಬೇರೆ ಕಡೆ ವರ್ಗಾಯಿಸುವ ಕಾರ್ಯ ಬಹುತೇಕ ಮುಗಿದಿದೆ. ಎಲ್ಲ ಠಾಣೆಯಲ್ಲಿ ಈಗ ಹೊಸ ಸಿಬ್ಬಂದಿಗಳ ಸೇವೆ ಆರಂಭವಾಗಿದೆ ಎಂದರು. ಜಿಲ್ಲೆಯ ಯಾವುದೇ ರಾಜಕಾರಣಿಗಳಿಂದ ತಮಗೆ ಒತ್ತಡವಿಲ್ಲ-ಉ.ಕ ಜಿಲ್ಲೆಯ ಹಾಲಿ ಸಚಿವರಾಗಲಿ, ಶಾಸಕರಾಗಲಿ ಅಥವಾ ಆಡಳಿತ ಪಕ್ಷದ ಯಾವುದೇ ರಾಜಕಾರಣಿಗಳಾಲಿ ತಮಗೆ ಯಾರಿಂದಲೂ ಸೇವೆ ಸಲ್ಲಿಸುವಾಗ ಒತ್ತಡವಿಲ್ಲ. ಮುಕ್ತವಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದರು.