ಶಿರಸಿ: ಅಕ್ಷಯ ಸೇವಾ ಪ್ರತಿಷ್ಠಾನ ಸಂಘಧಾಮ ಬನವಾಸಿ ರಸ್ತೆ, ಶಿರಸಿ, ಇವರ ಆಶ್ರಯದಲ್ಲಿ ಹಿರಿಯ ಪತ್ರಕರ್ತರು, ಜೇಷ್ಠ ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತ ಸ್ವರ್ಗೀಯ ಹೊ. ವೆ. ಶೇಷಾದ್ರಿಯವರ ‘ಪ್ರಬಂಧ ಸಂಚಯ’ ಪುಸ್ತಕ ಬಿಡುಗಡೆ ಸಮಾರಂಭ ಡಿ.21 ಮಂಗಳವಾರ ಸಂಜೆ 4.30 ಗಂಟೆಗೆ ಸಾಮ್ರಾಟ ಎದುರಿನ ‘ನೆಮ್ಮದಿ’ ಯಲ್ಲಿ ನಡೆಯಲಿದೆ.
ನಿವೃತ್ತ ಪ್ರಾಚಾರ್ಯ, ವಿದ್ವಾನ್ ಉಮಾಕಾಂತ ಭಟ್ಟ, ಕೆರೆಕೈ ಅವರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯರು, ನಿರ್ದೇಶಕರು ಶಿರಸಿ ಅರ್ಬನ್ ಬ್ಯಾಂಕ್’ನ ಪ್ರೊ. ಕೆ. ಎನ್. ಹೊಸಮನಿ, ನಿವೃತ್ತ ಪ್ರಾಚಾರ್ಯ ನಾರಾಯಣ ಭಟ್ಟ ಬಳ್ಳಿ ಪುಸ್ತಕ ಪರಿಚಯ ಮಾಡಲಿದ್ದಾರೆ.