• first
    second
    third
    previous arrow
    next arrow
  • ಯಲ್ಲಾಪುರಕ್ಕೆ ಸಂಗನಬಸಯ್ಯ ವರ್ಗಾವಣೆ

    300x250 AD

    ಮುಂಡಗೋಡ: ಕಳೆದ ಆರು ವರ್ಷಗಳಿಂದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂಗನಬಸಯ್ಯ ಅವರನ್ನು ಯಲ್ಲಾಪುರ ಪಟ್ಟಣ ಪಂಚಾಯತಕ್ಕೆ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

    300x250 AD


    ಸಾರ್ವಜನಿಕರೊಂದಗೆ ಉತ್ತಮ ಬಾಂಧವ್ಯ ಹೊಂದಿದ್ದ ಸಂಗನಬಸಯ್ಯ ಅವರು ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಮಾಡಿ ಕೊಡುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಇವರಿಗೆ ಬೆಳಗಾವಿಯ ಮಳವಳ್ಳಿ ಪುರಸಭೆಗೆ ವರ್ಗಾವಣೆಯಾಗಿತ್ತು. ಆದರೆ ಇವರೊಬ್ಬ ಉತ್ತಮ ಅಧಿಕಾರಿಯಾದ ಕಾರಣ ಸಚಿವ ಶಿವರಾಮ ಹೆಬ್ಬಾರ ಅವರು ಸಂಗನಬಸಯ್ಯ ಅವರನ್ನು ಯಲ್ಲಾಪುರ ಪಟ್ಟಣ ಪಂಚಾಯತಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮೊದಲ ಮುಖ್ಯಾಧಿಕಾರಿ ಇವರಾಗಿದ್ದಾರೆ.

    Share This
    300x250 AD
    300x250 AD
    300x250 AD
    Back to top