• first
    second
    third
    previous arrow
    next arrow
  • ಶಿರಸಿಯಲ್ಲೇ ಮೊದಲ ಡಿಜಿಟಲ್ ಲೈಬ್ರರಿ ಎಂ. ಎಂ ಕಾಲೇಜಿನಲ್ಲಿ

    300x250 AD

    ಶಿರಸಿ: ಆಧುನಿಕವಾಗಿ ತೊಡಗಿಕೊಂಡಿರುವ ಇಂದಿನ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾದರಿಯಲ್ಲಿಯೇ ಪುಸ್ತಕ ಪ್ರೀತಿ ಬೆಳೆಸುವುದು ಅನಿವಾರ್ಯವಾಗಿದೆ ಎಂದು ಎ.ವಿ ಬಾಳಿಗಾ ಕಾಲೇಜಿನ ಮುಖ್ಯ ಗ್ರಂಥ ಪಾಲಕರಾದ ಶಿವಾನಂದ ಬುಳ್ಳ ಹೇಳಿದರು.

    ಇವರು ನಗರದ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಗ್ರಂಥಾಲಯ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ನಡೆದ ಆನ್ಲೈನ್ ಡಿಜಿಟಲ್ ಲೈಬ್ರರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ವಿದ್ಯಾರ್ಥಿಗಳು ಪುಸ್ತಕಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವುದು ವಿಶಾದನೀಯ ಸಂಗತಿ. ಆಧುನಿಕ ಮನಸ್ಥಿತಿಯನ್ನು ಹೊಂದಿರುವ ವಿದ್ಯಾರ್ಥಿಗಳು ಡಿಜಿಟಲ್ ಲೈಬ್ರರಿಯ ಉಪಯೋಗದಿಂದ ಇನ್ನು ಉತ್ತಮ ಜ್ಞಾನವನ್ನು ಪಡೆದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳ ಮಹತ್ವವನ್ನು ತಿಳಿಸುವ ಪ್ರಯತ್ನದಲ್ಲಿ ಆನ್ಲೈನ್ ಡಿಜಿಟಲ್ ಲೈಬ್ರರಿಯನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಜೀವನ ಮೌಲ್ಯವನ್ನು ತಿಳಿಯುವುದರೊಂದಿಗೆ ಭಾಷಾ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳಬಹುದು.

    ಪ್ರತಿ ಹೆಜ್ಜೆಯಲ್ಲೂ ಮಾರ್ಗದರ್ಶನ ನೀಡುವ ಈ ಡಿಜಿಟಲ್ ಲೈಬ್ರರಿಯು ಜಾಗತಿಕ ಮಟ್ಟದ ಕೌಶಲ್ಯವನ್ನು ರೂಪಿಸುವಲ್ಲಿಯೂ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಸಮಯದ ಸದುಪಯೋಗದೊಂದಿಗೆ ಡಿಜಿಟಲ್ ಲೈಬ್ರರಿಯ ಸಂಪೂರ್ಣ ಪ್ರಯೋಜನ ಪಡೆದುಕೊಂಡಾಗ ಈ ಕಾರ್ಯಾಗಾರ ಯಶಸ್ವಿಯಾಗುತ್ತದೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಂ ಇ ಎಸ್ ನ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಎಂ ಇ ಎಸ್ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿ ನಮ್ಮೆಲ್ಲರ ಕನಸಾಗಿದೆ. ಡಿಜಿಟಲ್ ಲೈಬ್ರರಿಯಂತ ಆಧುನಿಕ ವ್ಯವಸ್ಥೆಯನ್ನು ಕಾಲೇಜಲ್ಲಿ ಸ್ಥಾಪಿಸಿರುವುದು ಇದರ ಮೊದಲ ಹೆಜ್ಜೆಯಾಗಿದೆ. ಗ್ರಂಥ ಪಾಲಕರಾದ ಶಾರದಾ ಭಟ್ ರವರ ಪ್ರಯತ್ನದಿಂದ ಇದು ಸಾಧ್ಯವಾಗಿದ್ದು ಎಲ್ಲ ಸಂಘಟಕರ ಪಾತ್ರವೂ ಮಹತ್ವದ್ದಾಗಿದೆ. ಇದು ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ಇನ್ನು ಹಲವು ಅಧ್ಯಯನ ಪೂರಕ ವ್ಯವಸ್ಥೆಗಳನ್ನು ಕಾಲೇಜಿನಲ್ಲಿ ಅಳವಡಿಸುವ ಪ್ರಯತ್ನದಲ್ಲಿದ್ದೇವೆ.ನಮ್ಮ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ವಿದ್ಯಾರ್ಥಿಗಳು ಈ ಎಲ್ಲ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಡಿಜಿಟಲ್ ಲೈಬ್ರರಿ ಯನ್ನು ಉತ್ತಮ ರೀತಿಯಾಗಿ ಉಪಯೋಗಿಸಿ ನಮ್ಮ ಸಂಸ್ಥೆಗೆ ಒಳ್ಳೆಯ ಹೆಸರು ತರಬೇಕು ಎಂದರು.

    300x250 AD


    ಕಾಲೇಜಿನ ಪ್ರಾಚಾರ್ಯೆ ಕೋಮಲಾ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕೋವಿಡ್ ನಿಂದಾಗಿ ವಿದ್ಯಾರ್ಥಿಗಳು ಪರಿಪೂರ್ಣ ಅಧ್ಯಯನದಿಂದ ವಂಚಿತರಾಗಿದ್ದಾರೆ. ಅವರಿಗೆ ಅಗತ್ಯ ಅಧ್ಯಯನ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಶಿರಸಿಯಲ್ಲಿ ಮೊದಲ ಬಾರಿಗೆ ಆನ್ಲೈನ್ ಡಿಜಿಟಲ್ ಲೈಬ್ರರಿಯನ್ನ ಸ್ಥಾಪಿಸಿರುವುದು ಕಾಲೇಜಿಗೆ ಹೆಮ್ಮೆಯ ಸಂಗತಿಯಾಗಿದೆ. ಕಾಲೇಜನ್ನು ಮಾದರಿಯನ್ನಾಗಿಸುವಲ್ಲಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಸಿಬ್ಬಂದಿಗೂ ಈ ಗೌರವ ಸಲ್ಲಬೇಕಿದೆ ಎಂದರು.

    ಇದೇ ಸಂದರ್ಭದಲ್ಲಿ ಶಿವಾನಂದ ಬುಳ್ಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ವೇದಿಕೆಯಲ್ಲಿ ಕಾಲೇಜು ಉಪಸಮಿತಿ ಸದಸ್ಯರಾದ ಜಿ.ಎಸ್ ಹೆಗಡೆ, ಲೋಕೇಶ್ ಹೆಗಡೆ, ವಿನಾಯಕ ಹೆಗಡೆ ಹಾಗೂ ಕಾಮರ್ಸ ಕಾಲೇಜಿನ ಮಾಜಿ ಪ್ರಾಚಾರ್ಯ ರವಿ ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸತೀಶ್ ನಾಯ್ಕ ನಿರ್ವಹಿಸಿದರು. ರವಿ ಕೊಳೇಕರ್ ವಂದಿಸಿದರು

    Share This
    300x250 AD
    300x250 AD
    300x250 AD
    Back to top