• Slide
    Slide
    Slide
    previous arrow
    next arrow
  • ಮಂಕಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಶಿಬಿರ ಯಶಸ್ವಿ

    300x250 AD

    ಹೊನ್ನಾವರ: ತಾಲೂಕಿನ ಮಂಕಿ ಪಟ್ಟಣ ಪಂಚಾಯತ ಸಭಾಭವನದಲ್ಲಿ ಗುರುವಾರ ಪೂರ್ವಾಹ್ನ 9 ರಿಂದ ಸಾಯಂಕಾಲ 5.30 ರವರೆಗೆ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಶಿಬಿರವನ್ನು ಏರ್ಪಡಿಸಲಾಗಿತ್ತು.

    ಸದ್ರಿ ಶಿಬಿರಕ್ಕೆ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಹಾಗೂ ಯೋಜನಾ ನಿರ್ದೇಶಕರು ಹೆಚ್.ಕೆ. ಕೃಷ್ಣಮೂರ್ತಿ ರವರು ಹಾಗೂ ಜಿಲ್ಲಾ ನಗರಾಭಿವೃದ್ಧಿಕೋಶದ ಕಾರ್ಯಪಾಲಕ ಅಭಿಯಂತರಾರ ವಿವೇಕ ತಡಲ್ಸೂರು, ಪರಿಸರ ಅಭಿಯಂತರರಾದ ಶುಭಂ ರವರುಗಳ ತಂಡ ಭೇಟಿ ನೀಡಿ ಶಿಬಿರದ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ಹಾಗೂ ಶಿಬಿರದ ಮಹತ್ವದ ಬಗ್ಗೆ ಹಾಗೂ ವರದಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದರು ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜಾರ್ಸ್ ಗಳು ಕಂಡುಬಂದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು.

    300x250 AD

    ಈ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ಹಾಗೂ ತಹಶೀಲ್ದಾರ ನಾಗರಾಜ ನಾಯ್ಕಡ ರವರು, ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಾದ ಅಜೇಯ ಭಂಡಾರಕರ್, ಪಟ್ಟಣ ಪಂಚಾಯತ ಮಂಕಿ ಸಹಾಯಕ ಅಭಿಯಂತರರು ಹಾಗೂ ಕ್ಯಾಂಪ್ ಅಧಿಕಾರಿಗಳಾದ ಸದಾನಂದ ಸಾಳೆಹಿತ್ತಲ, ಕಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀನಿವಾಸ ಗಣಪು ಹಳ್ಳೇರ ರವರು, ಬಿಲ್ ಕಲೆಕ್ಟರ್ ವಿಷ್ಣು ಹನ್ಮಂತ ನಾಯ್ಕ, ಮಂಜುನಾಥ ದೇವಿದಾಸ ನಾಯ್ಕ, ಗಣೇಶ ಬಾಲಚಂದ್ರ ನಾಯ್ಕ, ಮಂಜುನಾಥ ನಾರಾಯಣ ನಾಯ್ಕ ಹಾಗೂ ಜನಾರ್ಧನ ನಾರಾಯಣ ನಾಯ್ಕ ಮತ್ತು ರಾಜು ನಾಯ್ಕ ಮಂಕಿ ಹಾಗೂ ಊರ ನಾಗರಿಕರು ಹಾಜರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top