ಹಳಿಯಾಳ: ತಾಲೂಕ ಅರಣ್ಯವಾಸಿಗಳ ಸಭೆಯನ್ನು ಸ್ಥಳೀಯ ಭಾಗವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೀಮನಳ್ಳಿ ಗ್ರಾಮದಲ್ಲಿ ಡಿ.20 ಸೋಮವಾರದಂದು ಸಾಯಂಕಾಲ 4ಗಂಟೆಗೆ ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯವಾಸಿಗಳ ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯುವ ದಿಶೆಯಲ್ಲಿ ಬೆಳಗಾಂವ ಅಧಿವೇಶನದ ಡಿಸೆಂಬರ್ 22 ರಂದು ಅರಣ್ಯವಾಸಿಗಳ ‘ಬೆಳಗಾಂವ ಚಲೋ’ ಕಾರ್ಯಕ್ರಮದ ಪೂರ್ವಭಾವಿಯಾಗಿ ಚರ್ಚಿಸುವ ಉದ್ದೇಶದಿಂದ ಕರೆಯಲಾಗಿದ್ದು, ಸದ್ರಿ ಚರ್ಚೆಯಲ್ಲಿ ಆಸಕ್ತ ಅರಣ್ಯ ಅತಿಕ್ರಮಣದಾರರು ಆಗಮಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.