ಹೊನ್ನಾವರ: ತಾಲೂಕಾ ಆಸ್ಪತ್ರೆಯಲ್ಲಿ ಮಹಿಳೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಸುಮಾರು 5 ಕೆಜಿ ತೂಕದ ಗರ್ಭಕೋಶದ ಗಡ್ಡೆಯನ್ನು ಹೊರತೆಗೆದ್ದಾರೆ.
ಸರಕಾರಿ ಆಸ್ಪತ್ರೆ ಅಂದರೆ ಮೂಗು ಮುರಿಯುವ ಜನರೇ ಹೆಚ್ಚಿದ್ದಾರೆ. ಅಂತಹದರಲ್ಲಿ ಹಲವಾರು ಕೊರತೆಗಳ ನಡುವೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಹೊನ್ನಾವರದ ತಾಲೂಕಾ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು ಜನಸಾಮನ್ಯರ ಆಶಾಕಿರಣವಾಗಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಶಸ್ತ್ರ ಚಿಕಿತ್ಸಕರಾದ ಡಾ|| ಮಂಜುನಾಥ ಶೆಟ್ಟಿ ರವರು 55 ವರ್ಷದ ಬಡ ಮಹಿಳೆಯೊಬ್ಬಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಸರಿಸುಮಾರು 5 ಕೆ.ಜಿ ತೂಕದ ಗರ್ಭಕೋಶದ ಗಡ್ಡೆಯನ್ನು ಹೊರತೆಗೆದಿದ್ದಾರೆ.
ಕೆಲ ದಿನಗಳ ಹಿಂದೆ ತೀವೃತರನಾದ ಉಸಿರಾಟದ ತೊಂದರೆ, ರಕ್ತಸ್ರಾವ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದ ಬಡ ಮಹಿಳೆಯೊಬ್ಬಳು ಹೊನ್ನಾವರದ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಡಾ|| ಮಂಜುನಾಥ ಶೆಟ್ಟಿರವರು ಮಹಿಳೆಯನ್ನು ಪರೀಕ್ಷಿಸಿ ಹೊಟ್ಟೆಯಲ್ಲಿ ದೊಡ್ಡದಾದ ಗಡ್ಡೆ ಬೆಳದಿರುವುನ್ನು ಖಚಿತಪಡಿಸಿಕೊಂಡರು. ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ದುರ್ಮಾಂಸಯುಕ್ತ ಗರ್ಭಕೋಶದ ಗಡ್ಡೆಯನ್ನು ಹೊರತೆಗೆದಿದ್ದಾರೆ. ಮಹಿಳೆಯು ಅಪಾಯದಿಂದ ಪಾರಾಗಿದ್ದು ಈಗ ಆರೋಗ್ಯವಾಗಿದ್ದಾಳೆ. ಮಹಿಳೆಯು ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ದಾಖಲಾಗಿರುವದರಿಂದ ಆಸ್ಪತ್ರೆಯಲ್ಲಿ ದೊರಕುವ ಎಲ್ಲ ರೀತಿಯ ಚಿಕಿತ್ಸೆ ಮತ್ತು ಸೌಲಭ್ಯಗಳು ಉಚಿತವಾಗಿ ಲಭ್ಯವಾಗಿದೆ. ಶಸ್ತ್ರ ಚಿಕಿತ್ಸೆಯಲ್ಲಿ ಡಾ|| ಮಂಜುನಾಥ ಶೆಟ್ಟಿಯವರ ಜೊತೆ ಅರವಳಿಕೆ ತಜ್ಞರಾದ ಡಾ|| ಮಹೇಶ ಶೆಟ್ಟಿ, ಕಾರ್ಯನಿರ್ವಹಿಸಿದ್ದರು. ಶುಶ್ರೂಷಕಿಯರಾದ ಎ.ವಿ ಮರಿಯಮ್ಮ, ಭಾರತಿ ನಾಯ್ಕ, ಹಾಗೂ ಸಿಬ್ಬಂದಿಗಳಾದ ಕೃಷ್ಣಾ ಹಾಗೂ ನಾಗವೇಣಿ ಸಹಕರಿಸಿದರು. ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ ಡಾ|| ಮುಂಜುನಾಥ ಶೆಟ್ಟಿಯವರ ನೇತೃತ್ವದ ತಂಡಕ್ಕೆ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕಿಣಿ ಅಭಿನಂದಿಸಿದ್ದಾರೆ.