• first
  second
  third
  Slide
  previous arrow
  next arrow
 • ಕಾರ್ಯನಿರತ ಪತ್ರಕರ್ತರ ಸಂಘದಿಂದ ಜನರಲ್ ಬಿಪಿನ್ ರಾವತ್-ಸೈನಿಕರಿಗೆ ಶ್ರದ್ಧಾಂಜಲಿ

  300x250 AD

  ಹೊನ್ನಾವರ: ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಹಾಗೂ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

  ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ನಡೆಸಿದರು. ನಂತರ ನುಡಿನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

  ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಖಜಾಂಚಿ ಹಿರಿಯ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್ ಮಾತನಾಡಿ ಹೆಲಿಕಾಪ್ಟರ್ ದುರಂತ ಒಂದು ಅನಿರೀಕ್ಷಿತ ಘಟನೆಯಾಗಿದೆ. ಈ ಘಟನೆಗೆ ದೇಶವೇ ಮುಮ್ಮಲ ಮರಗಿದೆ. ನಿವೃತ್ತಿಯಾದ ನಂತರವು ಪುನಃ ಸೈನ್ಯದಲ್ಲಿ ಸೇವೆ ಸಲ್ಲಿಸಿದ ರಾವತ್ ಅವರ ದೇಶಪ್ರೇಮ ಅಭಿಮಾನ ಸೇವೆಅಮೂಲ್ಯವಾದದ್ದು. ಸ್ವಾತಂತ್ರ್ಯನಂತರದಲ್ಲಿ 3 ವಿಂಗ್ ಗಳ ಪ್ರಥಮ ಕಮಾಂಡರ್ ಆಗಿ ರಾವತ್ ಸೇವೆಸಲ್ಲಿಸಿದ್ದರು ಎಂದು ಶ್ಲಾಘಿಸಿ ನುಡಿನಮನ ಸಲ್ಲಿಸಿದರು.

  300x250 AD

  ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಕೃಷ್ಣ ಭಟ್ ಮಾತನಾಡಿ ಹುತಾತ್ಮರಾದ ಸೈನಿಕರು ನಮ್ಮ ದೇಶದ ಆಸ್ತಿ, ಹೆಲಿಕಾಪ್ಟರ್ ದುರಂತದ ಸುದ್ದಿ ಇಡಿ ದೇಶವನ್ನೇ ತಲ್ಲಣ ಗೊಳಿಸಿದೆ. ಅವರ ನೇತ್ರತ್ವದಲ್ಲೆ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ರಕ್ಷಣೆ ವಿಚಾರದಲ್ಲಿ ಪ್ರಧಾನಿ ಮೋದಿ ಅವರಿಗೆ ಸಾಥ್ ನೀಡಿ ಹೆಗಲಿಗೆ ಹೆಗಲು ಕೊಟ್ಟು ದೇಶದ ರಕ್ಷಣೆಯ ಜವಾಬ್ದಾರಿಯನ್ನು ಮುನ್ನಡೆಸುತ್ತಿದ್ದರು ಎಂದು ಸ್ಮರಿಸಿದರು.

  ಈ ಸಂದರ್ಭದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿಶ್ವನಾಥ್ ಶೆಟ್ಟಿ,ಕಾರ್ಯದರ್ಶಿ ನಾಗರಾಜ್ ನಾಯ್ಕ ಖರ್ವಾ, ಪದಾಧಿಕಾರಿಗಳಾದ ಕೃಷ್ಣಮೂರ್ತಿ ಭಟ್ , ಎಮ್.ಎನ್ ಸುಬ್ರಹ್ಮಣ್ಯ, ವಿ.ಪಿ ಮೇಸ್ತ, ಶಿವಾನಂದ ಮೇಸ್ತ,ವಕೀಲರಾದ ಸೂರಜ್ ನಾಯ್ಕ ಮತ್ತಿತರಿದ್ದರು.

  Share This
  300x250 AD
  300x250 AD
  300x250 AD
  Back to top