ಶಿರಸಿ: ಭಾರತ ಸರಕಾರದ ಕೇಂದ್ರ ಶಿಕ್ಷಣ ಸಚೀವಾಲಯದ ರಾಷ್ಟ್ರಮಟ್ಟದ ಕಲೋತ್ಸವ ಸ್ಫರ್ಧೆಗಳಲ್ಲಿ ಶಿರಸಿ ಜಿಲ್ಲಾಮಟ್ಟದ ಒಟ್ಟು 9 ವಿಭಾಗದ ಸ್ಪರ್ಧೆಗಳಲ್ಲಿ, ಶಿರಸಿ ಲಯನ್ಸ್ ಶಾಲೆಯ ವಿದ್ಯಾರ್ಥಿನಿಯರು ಒಟ್ಟು ಮೂರು ಸ್ಪರ್ಧೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಸ್ತುತಿ ತುಂಬಾಡಿ 9ನೇ ವರ್ಗ ಶಾಸ್ತ್ರೀಯ ನೃತ್ಯ, ಸಹನಾ ಶೆಟ್ಟಿ ಒಂಭತ್ತನೇ ವರ್ಗ ಶಾಸ್ತ್ರೀಯ ವಾದನ, ಶುಭಾ ಗುಡಿಗಾರ್ ದೇಸಿ ಆಟಿಕೆಗಳು ಮತ್ತು ಆಟಗಳು ಸ್ಫರ್ಧಾ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಆನ್ ಲೈನ್ ವೇದಿಕೆಯ ಮೂಲಕ ರಾಷ್ಟ್ರಮಟ್ಟದಲ್ಲಿ ನಡೆದ ಒಟ್ಟು ಒಂಭತ್ತು ವಿಭಾಗಗಳ ಸ್ಫರ್ಧೆಗಳಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯಿಂದ ಒಂದೇ ಶಾಲೆಯಿಂದ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುವ ಈ ಸಾಧನೆಯನ್ನು ತೋರಿದ ಎಲ್ಲಾ ವಿದ್ಯಾರ್ಥಿಗಳನ್ನು, ಅವರ ಪಾಲಕರನ್ನು, ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಶಾಲಾ ಶಿಕ್ಷಕರಾದ ಸೀತಾ ಹೆಗಡೆ ಹಾಗೂ ಮುಕ್ತಾ ನಾಯಕ್ ಇವರುಗಳನ್ನು, ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಶಿರಸಿ ಲಯನ್ಸ್ ಹಾಗೂ ಲಿಯೋ ಕ್ಲಬ್ ಬಳಗ, ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಹಾರ್ದಿಕವಾಗಿ ಅಭಿವಂದಿಸಿದ್ದಾರೆ.