
ತೋಟದಲ್ಲಿ ಕಾಳು ಮೆಣಸಿನ ಆರೈಕೆ ಹೀಗೆ ಮಾಡಿದರೆ ಉತ್ತಮ:
- ಬೊರ್ಡೊ ದ್ರಾವಣ ಸಿಂಪರಣೆ: ಈಗಾಗಲೇ ಹಲವು ಭಾಗಗಳಲ್ಲಿ ಕಪ್ಪು ಕೊಳೆ ರೋಗ ಕಾಣಿಸಿಕೊಳ್ಳುತ್ತಿರುವುದರಿಂದ ಕೂಡಲೇ 1% ಬೋರ್ಡೋ ದ್ರಾವಣ ಸಿಂಪಡಿಸಬೇಕು.
- ಬಳ್ಳಿಯ ಬುಡಗಳಿಗೆ ಕಾಪರ್ ಒಕ್ಸಿ ಕ್ಲೋರೈಡ್(5ಗ್ರಾಂ/ಲೀ. ನೀರಿಗೆ) ದ್ರಾವಣವನ್ನು ಎರಡು ಲೀ ಪ್ರತಿ ಬಳ್ಳಿಗೆ ಹೊಯ್ಯುವುದು.
- ಹಬ್ಬು ಕುಡಿ ಕತ್ತರಿಸಿ ತೆಗೆಯಬೇಕು. ಕತ್ತರಿಸಿದ ಭಾಗಕ್ಕೆ ಬ್ಲೈಟೊಕ್ಸ್ ಪೇಸ್ಟ ಹಚ್ಚಲು ಮರೆಯಬೇಡಿ.
- ಗೊಬ್ಬರ ಕೊಡುವುದು: 40 ಗ್ರಾಂ ಸಾರಜನಕ(90 ಗ್ರಾಂ ಯೂರಿಯಾ): 25 ಗ್ರಾಂ ರಂಜಕ(135 ಗ್ರಾಂ ರಾಕ್ ಫಾಸ್ಫೇಟ್ ಅಥವಾ SSP): 70 ಗ್ರಾಂ ಪೊಟ್ಯಾಷ್(115 ಗ್ರಾಂ ಒಔP) ಗೊಬ್ಬರವನ್ನು ಬಳ್ಳಿಯ ಸುತ್ತಲೂ 45 ಸೆಂ.ಮೀ. ದೂರದಲ್ಲಿ ಹರಡುವದು.
- ಬೇರು ಬರಿಸಿದ ಕಾಳುಮೆಣಸಿನ ಬಳ್ಳಿ ನೆಡಲು ಇದು ಸೂಕ್ತ ಕಾಲ. ಅಡಿಕೆ ಮರದಿಂದ 30 ಸೆಂ.ಮೀ.ದೂರದಲ್ಲಿ 45 ಸೆಂ.ಮೀ. ಘನಾಕಾರದ ಗುಂಡಿ ತೆಗೆದು 150 ಗ್ರಾಂ ರಾಕ್ ಫಾಸ್ಫೇಟ್, 500ಗ್ರಾಂ ಬೇವಿನಹಿಂಡಿ ಮತ್ತು 50 ಗ್ರಾಂ ಟ್ರೈಕೋಡರ್ಮ್‍ವನ್ನು ಹಾಕಿ ನೆಡಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9449628385
ಮಾಹಿತಿ ಕೃಪೆ: ಕಿಶೋರ ಹೆಗಡೆ.ಟಿ.ಎಂ.ಎಸ್.