ಸಿದ್ದಾಪುರ: ಶೇಡಿ ದಂಟಕಲ್, ಹೊಸ್ಮನೆ, ಮುತ್ಮುರ್ಡ್ ಮತ್ತು ಯಲೂಗಾರ್ ಗ್ರಾಮದ ಅಘನಾಶಿನಿ ಹವ್ಯಕ ಬಳಗವು ಇದೇ ಮೊದಲ ಬಾರಿಗೆ ಜನವರಿ 15 ರಂದು ರಾಜ್ಯ ಮಟ್ಟದ ಹವ್ಯಕರ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿದೆ.
ಆಸಕ್ತ ತಂಡಗಳು ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. 20 ತಂಡಗಳಿಗೆ ಅವಕಾಶವಿದ್ದು, ನಿಮ್ಮೆಲ್ಲರ ತನು, ಮನ, ಧನ ಸಹಾಯದ ನಿರೀಕ್ಷೆಯೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಸರು ನೊಂದಾಯಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ ವಿನಯ:9880190642, ಸಂತೋಷ:9449898009, ಮನೋಜ:9480799875 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.