
ಶಿರಸಿ: ಶಿರಸಿ ನಗರದಲ್ಲಿ 4.12 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಲಿರುವ ಹೆಸ್ಕಾಂ ಶಿರಸಿ ವೃತ್ತ ಹಾಗೂ ವಿಭಾಗೀಯ ಕಛೇರಿಗಳ ನೂತನ ಕಟ್ಟಡ ಸಂಕೀರ್ಣದ ಶಂಕುಸ್ಥಾಪನೆಯನ್ನು ಬುಧವಾರ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಕಟ್ಟಡ ಸಂಕೀರ್ಣದ ನಿರ್ಮಾಣದಿಂದ ಈ ವರೆಗೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಕಛೇರಿಗಳು ಸ್ವಂತ ಕಟ್ಟಡ ಹೊಂದಿ, ಒಂದೇ ಸ್ಥಳದಲ್ಲಿ ಇಲಾಖೆಯ ಅಧಿಕಾರಿಗಳು ಜನತೆಗೆ ಲಭ್ಯರಾಗುವಂತಾಗುತ್ತದೆ. ಇದರಿಂದ ಜನರಿಗೆ ಹೆಚ್ಚಿನ ಅಲೆದಾಟ ತಪ್ಪುವ ಜೊತೆಗೆ ಸರ್ಕಾರಕ್ಕೆ ಅನಾವಶ್ಯಕ ವೆಚ್ಚವೂ ತಗ್ಗಲಿದೆ ಎಂದು ಅಭಿಪ್ರಾಯ ಪಟ್ಟರು.