• first
    second
    third
    previous arrow
    next arrow
  • ಹಸಿ ಅಡಿಕೆ ಕದ್ದು, ಮಾರಾಟಕ್ಕೆ ಯತ್ನ; ಓರ್ವನ ಬಂಧನ, ಮತ್ತಿಬ್ಬರು ನಾಪತ್ತೆ

    300x250 AD

    ಶಿರಸಿ: ಅಡಿಕೆಗೆ ಬಂಪರ್ ಬೆಲೆ ಬಂದಿರುವುದರಿಂದ ಕಳ್ಳತನ ಪ್ರಕರಣ ಹೆಚ್ಚಾಗಿ ನಡೆಯುತ್ತಿದೆ. ತಾಲೂಕಿನ ಬನವಾಸಿ ವ್ಯಾಪ್ತಿಯಲ್ಲಿ ಹಸಿ ಅಡಿಕೆ ಕದ್ದು, ಬೇರೆಡೆಗೆ ಸಾಗಿಸುತ್ತಿದ್ದ ಕಳ್ಳರನ್ನು ಬನವಾಸಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    300x250 AD


    ಅರ್ಜುನ ಯಲ್ಲಪ್ಪ ಮಾಸ್ತ ಶಕುನಳ್ಳಿ ಬಂಧನಕ್ಕೊಳಗಾದವನಾಗಿದ್ದು, ಈತನ ಜೊತೆಯಾಗಿದ್ದ ಅಸ್ಲಂ ಅಬ್ದುಲ್ ಸಾಬ್, ಶಶಿ ಸುರೇಶ ಮಾದರ ನಾಪತ್ತೆಯಾಗಿದ್ದಾರೆ. ತೋಟದ ಮಾಲೀಕ ಗಣಪತಿ ಗುತ್ತೆಪ್ಪ ತೆಲಗುಂದ ಎಂಬುವವರ ಮನೆಯ 2 ಕ್ವಿಂಟಾಲ್ ಹಸಿ ಅಡಿಕೆ ಕಳ್ಳತನ ಮಾಡಿ, ಅದನ್ನು ಬೈಕ್ ಮೇಲೆ ಸಾಗಿಸುತ್ತಿರುವಾಗ ಆರೋಪಿ ಅರ್ಜುನನ್ನು ಬಂಧನ ಬನವಾಸಿ ಪಿಎಸೈ ಹನುಮಂತ ಬಿರಾದಾರ ಕಾರ್ಯಾಚರಣೆ ನಡೆಸಿ ಬಂಧಸಿದ್ದಾರೆ. ಮತ್ತಿಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    Share This
    300x250 AD
    300x250 AD
    300x250 AD
    Back to top