ಯಲ್ಲಾಪುರ: ತಾಲೂಕಿನ ಹಲಸಖಂಡ ಬಳಿ 2 ಸ್ಥಳಗಳಲ್ಲಿ ರಸ್ತೆ ಕೆಲಸಕ್ಕೆ ಬಂದ ಕಾರ್ಮಿಕರ ಜತೆ ಇರುವ 9 ಮಕ್ಕಳನ್ನು ಶಾಲೆಗೆ ಕಳುಹಿಸುವ ಕುರಿತು ಕಾರ್ಮಿಕರ ಮನವೊಲಿಸುವಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೇತೃತ್ವದಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಹಲಸಖಂಡ ಬಳಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕೆಲಸಕ್ಕೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಿಂದ ಕಾರ್ಮಿಕರು ಬಂದಿದ್ದಾರೆ. ಅವರೊಂದಿಗೆ ಒಟ್ಟು 9 ಜನ ಮಕ್ಕಳೂ ಇದ್ದಾರೆ. ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಗುರುವಾರ ಶಿಕ್ಷಣ ಇಲಾಖೆ, ಸಿಡಿಪಿಒ ಇಲಾಖೆ ಹಾಗೂ ಪೆÇಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ವಿಚಾರಿಸಿದರು. ಮಕ್ಕಳನ್ನು ಶಿಕ್ಷಣದಿಂತ ವಂಚಿತರಾಗಿಸದಂತೆ ವಿನಂತಿಸಿ, ಕಾರ್ಮಿಕರ ಮನವೊಲಿಸುವಲ್ಲಿ ಯಶಸ್ವಿಯಾದರು.
ಮಕ್ಕಳನ್ನು ಆಯಾ ವಯಸ್ಸಿಗೆ ತಕ್ಕಂತೆ ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೆ ಕಳುಹಿಸಲು ಕಾರ್ಮಿಕರು ಒಪ್ಪಿದರು. ಅಲ್ಲದೇ 16 ವರ್ಷದ ಒಬ್ಬ ಬಾಲಕಿ ಇದ್ದು, ಅವಳಿಗೆ ವೃತ್ತಿಪರ ತರಬೇತಿ ನೀಡುವುದಕ್ಕೂ ಸಿದ್ಧರಾದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಂಸ್ಥಿಕ ರಕ್ಷಣಾಧಿಕಾರಿ ಮಹೇಶ ಜಿ.,ಔಟ್ ರೀಚ್ ವರ್ಕರ್ ಸಂಪತ ಕುಮಾರ, ಸಿ.ಆರ್.ಪಿ ರಾಮಚಂದ್ರ ದಬ್ಲಿ, ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ಮರಾಠಿ ಇತರರಿದ್ದರು.