ಹೊನ್ನಾವರ: ಹೊನ್ನಾವರ ಪಿ ಎಸ್ ಐ ಶಶಿಕುಮಾರ ಅವರ ನೇತ್ರತ್ವದಲ್ಲಿ ಪಟ್ಟಣದ ಬಂದರ ಸಮೀಪದ ಗ್ಯಾಸ್ ಗೋಡಾನ್ ಒಂದರ ಪಕ್ಕದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿರುವ ಸಂದರ್ಭದಲ್ಲಿ ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇನ್ನೋರ್ವ ಪರಾರಿಯಾಗಿದ್ದು ಹುಡುಕಾಟ ನಡೆಸುತ್ತಿದ್ದಾರೆ.
ಬಂಧಿತ ಆರೋಪಿ ಗುರುರಾಜ ನಾಗರಾಜ ಹರಿಜನ ಎಂದು ತಿಳಿದು ಬಂದಿದೆ. ಪ್ರಶಾಂತ ಮುರಳಿಧರ ಅಂಬಿಗ ಪರಾರಿಯಾಗಿದ್ದು, ಹುಡುಕಾಟ ಮುಂದುವರಿಸಿದ್ದಾರೆ, ಬಂಧಿತ ಆರೋಪಿಗಳಿಂದ ಒಟ್ಟು 10 ಪ್ಯಾಕೇಟ್ ಗಾಂಜಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೆÇಲೀಸರು ತನಿಖೆ ತೀವ್ರಗೊಳಿಸಿದ್ದಾರೆ.