ಅಂಕೋಲಾ: ಗ್ರಾಮಸ್ಥರೇ ಮುಂದಾಗಿ ನಿರ್ಮಿಸಿದ ಹಳವಳ್ಳಿ-ಕನಕನಹಳ್ಳಿ ರಸ್ತೆ ಉತ್ತಮವಾಗಿದೆ, ಆದಷ್ಟು ಶೀಘ್ರದಲ್ಲಿ ಇದು ಸಾರ್ವಕಾಲಿಕ ರಸ್ತೆಯಾಗಲಿ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೆಂದ್ರ ಸರಸ್ವತಿ ಮಹಾಸ್ವಾಮಿಗಳು ಹಾರೈಸಿ ದೀಪ ಬೆಳಗಿಸಿ, ಆಶೀರ್ವದಿಸಿ ಮಂತ್ರಾಕ್ಷತೆ ನೀಡಿದರು.
ತಾಲೂಕಿನ ಕಲ್ಲೇಶ್ವರದಲ್ಲಿ ಕುಳಿನಾಡು ಸೀಮೆ, ಸ್ವರ್ಣವಲ್ಲಿ ಮಠ, ಹವ್ಯಕ ಜಾಗ್ರತ ಪಡೆ ಇವರ ಆಶ್ರಯದಲ್ಲಿ ಬ್ರಾಹ್ಮಣ್ಯ ಉಳಿಸಿ ಕಾರ್ಯಕ್ರಮಕ್ಕೆ ಶ್ರೀಗಳು ಕಕ್ಕಳ್ಳಿ-ಕನಕನಹಳ್ಳಿ ಮಾರ್ಗವಾಗಿ ಆಗಮಿಸಿ, ಉತ್ತಮವಾಗಿ ರಸ್ತೆ ಮಾಡಿದ್ದಿರಿ ಆದಷ್ಟು ಬೇಗ ಸರ್ವಋತು ರಸ್ತೆಯಾಗಲಿ ಎಂದು ಆಶೀರ್ವದಿಸಿದರು.
ಗ್ರಾಮಸ್ಥರ ಶ್ರಮದಾನ: ಡೋಂಗ್ರಿ ಪಂಚಾಯತದ ಹಳವಳ್ಳಿ, ಕನಕನಹಳ್ಳಿ, ಕಲ್ಲೇಶ್ವರ, ಹೆಗ್ಗಾರ ಊರುಗಳಿಗೆ ಕಳೆದ ವರ್ಷದ ಗಂಗಾವಳಿ ಪ್ರವಾಹದಿಂದ ಗುಳ್ಳಾಪುರ ಸೇತುವೆ ಕೊಚ್ಚಿ ಹೋಗಿರುವುದರಿಂದ ಈ ಭಾಗದ ಜನರಿಗೆ ಸಂಕಷ್ಟವಾಗಿದೆ. ಆದ್ದರಿಂದ ಕನಕನಹಳ್ಳಿ-ಹಳವಳ್ಳಿ ಉತ್ಸಾಹಿಗಳು ಶಾಸಕಿ ರೂಪಾಲಿ ನಾಯ್ಕ ಸಹಕಾರದೊಂದಿಗೆ, ಶಿರಸಿಗೆ ಸಮೀಪದ ಮತ್ತು ಯಲ್ಲಾಪುಕ್ಕೆ ತೆರಳಲೂ ಸುಲಭವಾಗಿ ಸಾಗಬಹುದಾದ ಮಾರ್ಗವಾಗಿದೆ. ಕಡಿಮೆ ಘಟ್ಟ ಹಾಗೂ ತಿರುವುಗಳಿರುವ, ಆದರೆ ಕೊರಕಲು ಬಿದ್ದು, ಓಡಾಟಕ್ಕೆ ಕಷ್ಟವಾಗಿದ್ದ ಕಕ್ಕಳ್ಳಿ-ಮುಸ್ಕಿ- ಕನಕನಹಳ್ಳಿ- ಹಳವಳ್ಳಿ ರಸ್ತೆಯನ್ನು ಫಲಾನುಭವಿ ಗ್ರಾಮಸ್ಥರ ದೇಣಿಗೆಯೊಂದಿಗೆ ಶ್ರಮದಾನ ಮಾಡಿ ಸುರಕ್ಷಿತ ವಾಹನ ಓಡಾಡುವಂತೆ ಒಂದೆರಡು ದಿನದಲ್ಲಿ ಸಿದ್ದ ಪಡಿಸಿದರು. ಅಲ್ಲದೇ ಉತ್ತರ ಕನ್ನಡಕ್ಕೆ ಹೊಸ ರೂಪ ನೀಡಿದ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಇವರ ಕನಸಿನ ಮಾರ್ಗ ಕೂಡಾ ಹೌದು.
ಈ ಸಂದರ್ಭದಲ್ಲಿ ಮುಸ್ಕಿ ಗ್ರಾಮಸ್ಥರು, ರಸ್ತೆಯ ಶ್ರಮದಾನಕ್ಕೆ ಸಹಕರಿಸಿದ ಕನಕನಹಳ್ಳಿ, ಹಳವಳ್ಳಿಯ ಗ್ರಾಮಸ್ಥರು ಇದ್ದರು