ಹಳಿಯಾಳ: ಇಲ್ಲಿನ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯು 18ರಿಂದ 45 ವಯಸ್ಸಿನ ನಿರುದ್ಯೋಗಿ ಯುವಕ- ಯುವತಿಯರಿಗಾಗಿ 10 ದಿನಗಳ ಫೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ ಉಚಿತ ತರಬೇತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ತರಬೇತಿಯಲ್ಲಿ ಕೌಶಲ್ಯ, ಸಾಫ್ಟ್ ಸ್ಟೀಲ್ ಯೋಗ ತರಬೇತಿ ಹಾಗೂ ಬ್ಯಾಂಕಿಂಗ್, ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಬಗೆಗಿನ ಮಾಹಿತಿ ನೀಡಲಾಗುವುದು. ತಮ್ಮ ಹೆಸರು, ವಿಳಾಸ ನೊಂದಾಯಿಸಿಕೊಳ್ಳಲು ಡಿ.25 ಕೊನೆ ದಿನ. ತರಬೇತಿ ಅವಧಿಯಲ್ಲಿ ಊಟ, ವಸತಿ ಉಚಿತ. ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ. ಆಸಕ್ತರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ವಿಳಾಸಕ್ಕೆ ಸಂಪರ್ಕಿಸುವಂತೆ ಸಂಸ್ಥೆಯ ಮೊ: 9483485489, 9482188780, 9743321062, 08284-295307, 220807ಕ್ಕೆ ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.