ಶಿರಸಿ: ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಡಿ. 18 ರಂದು ವರ್ಷದ ಕೊನೆಯ ಲೋಕ ಅದಾಲತ್ ನಡೆಯಲಿದೆ.
ನ್ಯಾಯಾಲಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ನ್ಯಾಯಧೀಶರಾದ ರಾಜು ಶೇಡಬಾಳಕರ್ ಮಾಹಿತಿ ನೀಡಿದರು. ನ್ಯಾಯಾಲಯಕ್ಕೆ ಬಂದ ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥ ಮಾಡುವ ಉದ್ದೇಶದಿಂದ ಲೋಕ ಅದಾಲತ್ ಆಯೋಜಿಸಲಾಗುತ್ತಿದೆ. ಈ ವರ್ಷ ನ್ಯಾಯಾಲಕ್ಕೆ 2697 ಪ್ರಕರಣ ಬಂದಿದೆ. ಅದರಲ್ಲಿ ಹಾಲಿ 1500 ಪ್ರಕರಣ ಇತ್ಯರ್ಥ ಆಗಿದೆ ಎಂದು ತಿಳಿಸಿದರು.
ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು ಅದಾಲತ್ ನಲ್ಲಿ ಇತ್ಯರ್ಥ ಆಗಿರುವುದರಿಂದ ನ್ಯಾಯಾಲಯದ ಹೊರೆ ಕಡಿಮೆ ಆಗಿದೆ. ಇದರಲ್ಲಿ ವಕೀಲರ ಸಂಘದ ಪ್ರಯತ್ನ ಇದೆ ಎಂದು ತಿಳಿಸಿದರು.
ಸರ್ಕಾರಿ ಅಭಿಯೋಜಕಿ ಸೋಫಿಯಾ ಇನಾಮ್ದಾರ್ ಇದ್ದರು.