• first
    second
    third
    previous arrow
    next arrow
  • ಸಂಗೀತದಲ್ಲಿ ಮನರಂಜನೆ ಜೊತೆ ಆಧ್ಯಾತ್ಮವೂ ಅಡಗಿದೆ; ವಿಜಯಲಕ್ಷ್ಮೀ

    300x250 AD

    ಶಿರಸಿ: ಸಂಗೀತದಲ್ಲಿ ಕೇವಲ ಮನರಂಜನೆ ಮಾತ್ರ ಇಲ್ಲ, ಆಧ್ಯಾತ್ಮವೂ ಅಡಕವಾಗಿದೆ ಎಂದು ಎಪಿಎಂಸಿ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ಅಭಿಪ್ರಾಯಿಸಿದರು.


    ನಗರದ ರೈತಭವನದಲ್ಲಿ ಇಲ್ಲಿನ ಸ್ವರಾಂಜಲಿ ಸಂಸ್ಥೆ ಹಮ್ಮಿಕೊಂಡಿದ್ದ ಹಮ್ಮಿಕೊಂಡಿದ್ದ ಸ್ವರಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಗೀತವನ್ನು ಇಷ್ಟಪಡದವರಿಲ್ಲ. ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಅದಕ್ಕಿದೆ. ಇದು ಮನಸ್ಸಿಗೆ ಹತ್ತಿರವಾದ ವಿದ್ಯೆಗಳಲ್ಲಿ ಒಂದು. ದೈವಿಕತ್ವದ ಭಾವವೂ ಸಂಗೀತಕ್ಕಿದೆ ಎಂದರು.

    ಕ್ಯಾಂಮ್ಕೋ ಸಂಸ್ಥೆ ಮುಖ್ಯಸ್ತ ಚಂದ್ರಕಾಂತ ಮಾತನಾಡಿ, ಸಂಗೀತ ಸೇರಿದಂತೆ ಎಲ್ಲ ವಿದ್ಯೆಗಳನ್ನು ಗುರು ಮುಖ್ಯೇನ ಅರಿಕೆ ಮಾಡಲು ಸಾಧ್ಯ. ಅದರೆ ಅದಕ್ಕೆ ಸ್ಪಷ್ಟಗುರಿಯೂ ಬೇಕು ಎಂದರು.

    300x250 AD

    ಪ್ರಾಧ್ಯಾಪಕ ಶ್ರೀಧರ ಭಟ್ ಮಾತನಾಡಿ, ಸಂಗೀತ ಸುಲಭವಾಗಿ ಒಲಿಯುವ ವಿದ್ಯೆ ಅಲ್ಲ. ದೃಢ ನಿರ್ಧಾರ, ಸತತ ಪ್ರಯತ್ನದಿಂದ ಮಾತ್ರ ಅದನ್ನು ಒಲಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

    ಸಂಗೀತ ಶಾಲೆ ಪ್ರಾಧ್ಯಾಪಕ ವಿದ್ವಾನ್ ಮಹಾಬಲೇಶ್ವರ ಹೆಗಡೆ, ಸಾಹಿತಿ ಜಯಲಕ್ಷ್ಮೀ, ಉಷಾ ಜೆ, ವಸುಂಧರಾ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

    Share This
    300x250 AD
    300x250 AD
    300x250 AD
    Back to top