• first
    second
    third
    previous arrow
    next arrow
  • ಡಿ.19 ಕ್ಕೆ ಯಲ್ಲಾಪುರದಲ್ಲಿ ಅತಿಕ್ರಮಣದಾರರ ಸಭೆ

    300x250 AD

    ಯಲ್ಲಾಪುರ: ಅರಣ್ಯವಾಸಿಗಳ ಯಲ್ಲಾಪುರ ತಾಲೂಕಿನ ಸಭೆಯನ್ನು ಸ್ಥಳೀಯ ತಹಶೀಲ್ದಾರ್ ಕಚೇರಿ ಪಕ್ಕ ನೌಕರರ ಸಭಾಭವನದಲ್ಲಿ ಡಿ.19 ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಕರೆಯಲಾಗಿದೆ ಎಂದು ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD

    ಅರಣ್ಯವಾಸಿಗಳ ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯುವ ದಿಶೆಯಲ್ಲಿ ಬೆಳಗಾಂವ ಅಧಿವೇಶನದ ಡಿಸೆಂಬರ್ 22 ರಂದು ಅರಣ್ಯವಾಸಿಗಳ `ಬೆಳಗಾಂವ ಚಲೋ’ ಕಾರ್ಯಕ್ರಮದ ಪೂರ್ವಭಾವಿಯಾಗಿ ಚರ್ಚಿಸುವ ಉದ್ದೇಶದಿಂದ ಕರೆಯಲಾಗಿದ್ದು, ಚರ್ಚೆಯಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಉಪಸ್ಥಿತರಿರುವರು. ಕಾರಣ ಸದ್ರಿ ಚರ್ಚೆಯಲ್ಲಿ ಆಸಕ್ತ ಅರಣ್ಯ ಅತಿಕ್ರಮಣದಾರರು ಆಗಮಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top