ಶಿರಸಿ: ಇಲ್ಲಿನ ಉಪವಿಭಾಗ ವ್ಯಾಪ್ತಿಯಲ್ಲಿ ಪಿ.ಡಬ್ಲು.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಾಗೂ ಲಿಂಕ್ ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.18 ಶನಿವಾರ ಬೆಳಿಗ್ಗೆ 9 ರಿಂದ ಸಾಯಂಕಾಲ 6 ಗಂಟೆವರೆಗೆ ಪಟ್ಟಣ ಶಾಖೆಯ ಕಸ್ತೂರಬಾನಗರ 11 ಕೆ.ವಿ ಮಾರ್ಗದ ಮರಾಠಿಕೊಪ್ಪ, ಲಯನ್ಸ್‍ನಗರ, ಗುರುನಗರ, ಕೊಪ್ಪಳ ಕಾಲೋನಿ, ಪ್ರಗತಿ ನಗರ, ವಿದ್ಯಾನಗರ, ಸಹ್ಯಾದ್ರಿ ಕಾಲೋನಿ, ಕಸ್ತೂರಬಾನಗರ, ಕೆ,ಎಚ್.ಬಿ. ಕಾಲೋನಿ, ವಿವೇಕಾನಂದನಗರ, ಕಾಲೇಜು ರಸ್ತೆಪ್ರದೇಶಗಳಲ್ಲಿ. ಗ್ರಾಮೀಣ-1 ಶಾಖೆಯ ತಾರಗೋಡ 11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ, ಗ್ರಾಮೀಣ-1 ಶಾಖೆಯ 1 ಕೆ.ವಿ ಮಾರ್ಗದ ಚಿಪಗಿ ಹಾಗೂ ನಾರಾಯಣಗುರುನಗರ ಪ್ರದೇಶಗಳಲ್ಲಿ, ಪಟ್ಟಣ ಶಾಖೆಯ ಶಿರಸಿ-1 ಹಾಗೂ ನಿಲೇಕಣಿ 11 ಕೆ.ವಿ ಮಾರ್ಗದ ರಾಘವೇಂದ್ರ ವೃತ್ತ, ಕೋರ್ಟ್ ರಸ್ತೆ, ದೇವಿಕೆರೆ, ಹಳೆ ಬಸ್ ನಿಲ್ದಾಣ, ಕುಮಟಾ ರಸ್ತೆ, ಸಿ.ಪಿ.ಬಜಾರ್, ಝೂ ವೃತ್ತ ಪ್ರದೇಶಗಳಲ್ಲಿ, ಗ್ರಾಮೀಣ-2 ಹಾಗೂ ಹುಲೇಕಲ್ ಶಾಖೆಯ ಸಂಪಖಂಡ, ಮಾರಿಗದ್ದೆ, ಕೆಂಗ್ರೆ, ದೇವನಳ್ಳಿ, ಹುಲೇಕಲ್, ಸಾಲ್ಕಣಿ, ವಾನಳ್ಳಿ 11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ, 220/11 ಕೆವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಶಾಖೆಯ 11 ಕೆ.ವಿ, ಮಾರ್ಗಗಳಾದ ಬಿಸಲಕೊಪ್ಪ, ದೊಡ್ನಳ್ಳಿ ಪ್ರದೇಶಗಳಲ್ಲಿ, ಬನವಾಸಿ ಶಾಖೆಯ ಭಾಶಿ ಮತ್ತು ಅಂಡಗಿ 11 ಕೆವಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.