ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಆಟೋ& ಪ್ರೋಪರ್ಟಿ ಎಕ್ಸ್ಪೋ-2021 ಪ್ರದರ್ಶನ-ಖರೀದಿ-ಮಾರಾಟ ಮೇಳವನ್ನು ಶಿರಸಿ ವಿಭಾಗದ ಡಿ.ವೈ.ಎಸ್.ಪಿ ರವಿ ನಾಯ್ಕ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಆಡಳಿತ ಮಂಡಳಿ ಸದಸ್ಯ ಸಿ.ಎನ್. ಹೆಗಡೆ ಹೂಡ್ಲಮನೆ, ಸಂಘದ ಪ್ರಧಾನ ವ್ಯವಸ್ಥಾಪಕ ರವೀಶ ಅ. ಹೆಗಡೆ, ಅಧೀಕೃತ ವಾಹನ ವಿತರಕರು, ಬ್ಯಾಂಕ್‍ನ ಪ್ರತಿನಿಧಿಗಳು, ಸಂಘದ ಸದಸ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಆಟೋ& ಪ್ರೋಪರ್ಟಿಎಕ್ಸ್‍ಪೋ ದಲ್ಲಿಗ್ರಾಹಕರಿಗೆ ಒಂದೇ ಸ್ಥಳದಲ್ಲಿ ಬೇರೆ ಬೇರೆ ಕಂಪನಿಗಳ ವಾಹನಗಳ ವೀಕ್ಷಣೆಗೆ, ಖರೀದಿಗೆ ಹಾಗೂ ತೋಟ, ಜಮೀನು, ನಿವೇಶನ ಕೊಡು-ಕೊಳ್ಳುವಿಕೆಗೂ ನೇರ ಅವಕಾಶ ಕಲ್ಪಿಸಲಾಗಿದೆ.
ಈ ಮೇಳದಲ್ಲಿ ಸದಸ್ಯರು ಮತ್ತುಗ್ರಾಹಕರು ತಮ್ಮ ಹಳೇಯ ಕಾರು ಅಥವಾ ಬೈಕ್‍ಗಳನ್ನು ವಿನಿಮಯ ಮಾಡಿ ಹೊಸ ವಾಹನವನ್ನು ಖರೀದಿಸಬಹುದಾಗಿದೆ. ಇದರ ಜೊತೆಗೆ ಸ್ಥಳದಲ್ಲೇ ಬ್ಯಾಂಕ್‍ಗಳ ಮೂಲಕ ಸಾಲ-ಸೌಲಭ್ಯ ಅವಕಾಶ ಕಲ್ಪಿಸಲಾಗಿದೆ.
ಡಿಸೆಂಬರ್16 ಮತ್ತು 17ರಂದು ನಡೆಯಲಿರುವ ಈ ಮೇಳದಲ್ಲಿ ಪ್ರತಿಷ್ಠಿತ ದ್ವಿಚಕ್ರ ವಾಹನದ ಪ್ರಸಿದ್ಧ ಪೂರೈಕೆ ಕಂಪನಿಗಳಾದ ಹೋಂಡಾ, ಸುಜುಕಿ, ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳಾದ ಅಮೋಘ ಮೋಟಾರ್ಸ್, ರಾಣಿ ಮೋಟಾರ್ಸ್ ಹಾಗೂ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಝುಕಿ, ಹುಂಡೈ, ಜೀಪ್ ನೆಕ್ಸಾ, ಫೋರ್ಡ್, ಟಾಟಾ ಮೋಟರ್ಸ್, ಟೊಯೋಟಾ, ರೆನಾಲ್ಟ್, ಕಿಯಾ ಮತ್ತು ಮೊರಿಸ್‍ಗರಾಜಸ್(ಎಮ್.ಜಿ.) ಪಾಲ್ಗೊಂಡಿದ್ದು ಸದಸ್ಯರು ಹಾಗೂ ಗ್ರಾಹಕರು ಈ ಮೇಳದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.