• first
  second
  third
  previous arrow
  next arrow
 • ಶುಂಠಿ ಬೆಳೆಗೆ ಕೊಳೆ ;ಕುಸಿಯುತ್ತಿರುವ ಬೆಲೆ ; ಕಂಗಾಲಾದ ರೈತ

  300x250 AD

  ಮುಂಡಗೋಡ: ತಾಲೂಕಿನಾದ್ಯಂತ ಶುಂಠಿ ಬೆಳೆಗೆ ಕೊಳೆರೋಗ ಕಾಣಿಸಿಕೊಂಡ ಪರಿಣಾಮ ನೂರಾರು ಶುಂಠಿ ಬೆಳೆಗಾರರು ಲಕ್ಷಾಂತರ ರು. ಹಾನಿ ಅನುಭವಿಸುವಂತಹ ಪರಿಸ್ಥಿತಿ ಬಂದೊದಗಿದೆ.ತಾಲೂಕಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ಭತ್ತದ ಬೆಳೆಯನ್ನು ಬೆಳೆಯಲಾಗುತ್ತದೆ ಆದರೆ ಕಳೆದ ಹಲವಾರು ವರ್ಷಗಳಿಂದಿಚೆಗೆ ರೈತರು ಅಡಕೆ, ಬಾಳೆ, ಕಬ್ಬು, ಗೋವಿನಜೊಳ, ಶುಂಠಿ, ಬೆಳೆಗಳತ್ತ ಮುಖ ಮಾಡುತ್ತಾ ಸಾಗಿದ್ದಾರೆ. ಹೆಚ್ಚಿನ ಲಾಭ ಗಳಿಸುವ ಉದ್ದೇಶವೂ ಈ ವ್ಯವಸಾಯದ ಉದ್ದೇಶವಾಗಿದೆ.

  ಆರಂಭದಲ್ಲಿ ಶುಂಠಿ ಬೆಳೆದ ರೈತರು ಪುಣೆ, ಮುಂಬೈ, ತಮಿಳುನಾಡು, ಕೇರಳ ಮಾರುಕಟ್ಟೆಗೆ ಶುಂಠಿ ಕಳುಹಿಸಿ ಲಕ್ಷ ಲಕ್ಷ ಹಣ ಸಂಪಾದಿಸಿಕೊoಡರು. ಆದರೆ ಕಳೆದ ಎರಡುವರ್ಷಗಳಿಂದ ಶುಂಠಿ ಬೆಳೆಗಾರರು ಹಾನಿ ಅನುಭವಿಸುತ್ತಿದ್ದು ಈ ವರ್ಷ ತಾಲೂಕಿನಲ್ಲಿ 400ಕ್ಕೂ ಅಧಿಕ ರೈತರು 360ಹೆಕ್ಟರ ಪ್ರದೇಶದಲ್ಲಿ ಶುಂಠಿ ಬೆಳೆಯನ್ನು ಬೆಳೆದು ನಷ್ಟ ಅನುಭವಿಸುವಂoತಾಗಿದೆ. ಸತತವಾಗಿ ಸುರಿದ ಮಳೆಗೆ ಗದ್ದೆಗಳಲ್ಲಿ ಹೆಚ್ಚಿನ ತೇವಾಂಶವುAಟಾಗಿ ಶುಂಠಿ ಬೆಳೆಗೆ ಕೊಳೆರೋಗ ಕಾಣಿಸಿಕೊಂಡಿದ್ದು ರೋಗ ಹತೋಟಿಗೆ ತರಲು ಬಗೆ ಬಗೆಯ ಔಷಧಿ ಸಿಂಪರಿಸಿದರೂ ನಿರಂತರರವಾಗಿ ಮಳೆ ಸುರಿಯುತ್ತಲೆ ಇದ್ದ ಪರಿಣಾಮ ಕೊಳೆರೋಗ ಹತೋಟಿಗೆ ತರಲು ಸಾದ್ಯವಾಗಲಿಲ್ಲ.

  ಇದರಿಂದ ಇಳುವರಿಯ ಮೇಲೆ ತೀವ್ರ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ತಾಲೂಕಿನಲ್ಲಿ ಬೆಳೆಯುವ ಶುಂಠಿಗೆ ಕ್ವಿಂಟಾಲ್ ಗೆ 2500ರಿಂದ 3000ರೂ. ವರೆಗೆ ಮಾರುಕಟ್ಟೆಯಲ್ಲಿ ಬೆಲೆ ಸಿಕ್ಕರೆ ಬೆಳೆಗಾರರಿಗೆ ಲಾಭವಾಗುತ್ತದೆ ಇಲ್ಲದಿದ್ದರೆ ರೈತರು ಹಾನಿ ಅನುಭವಿಸಬೇಕಾಗುತ್ತದೆ. ಸದ್ಯ ಕ್ವಿಂಟಾಲ್ ಗೆ 1500ರೂ. ದರವಿದೆ. ಇದರಿಂದ ಗದ್ದೆಯಲ್ಲಿನ ಅಲ್ಪಸ್ವಲ್ಪ ಬೆಳೆಯನ್ನು ಸಹ ರೈತರು ಕಟಾವ್ ಮಾಡಲು ಹಿಂದೇಟು ಹಾಕುವಂತಾಗಿದೆ.
  ಲಕ್ಷಾoತರ ರೂ. ನಷ್ಟ ಅನುಭವಿಸುವಂತಾಗಿದೆ.

  300x250 AD

  ಒoದು ಎಕರೆಯಲ್ಲಿ ಶುಂಠಿ ಬೆಳೆಯಲು ರೈತರು ಎರಡುಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡುತ್ತಾರೆ. ಸಮರ್ಪಕವಾದ ಇಳುವರಿ ಹಾಗೂ ಬೆಲೆ ಸಿಕ್ಕರೆ ಎಕರೆಗೆ ನಾಲ್ಕುಲಕ್ಷರೂ. ಮೌಲ್ಯದ ಶುಂಠಿಯನ್ನು ಬೆಳೆಯಲಾಗುತ್ತದೆ ಆದರೆ ಈ ವರ್ಷ ಒಂದಡೆ ಕೊಳೆರೋಗದಿಂದ ಇಳುವರಿಯ ಕುಂಠಿತವಾದರೆ ಮತ್ತೊಂದಡೆ ದರ ಕುಸಿತವಾಗಿದ್ದು ಇದರಿಂದ ಶುಂಠಿ ಬೆಳೆಗಾರರು ಲಕ್ಷಾಂತರ ರೂ. ಹಾನಿ ಅನುಭವಿಸಬೇಕಾಗಿದೆ.

  Share This
  300x250 AD
  300x250 AD
  300x250 AD
  Back to top