ದಾಂಡೇಲಿ: ಇಲ್ಲಿನ ದಂಡಕಾರಣ್ಯ ಇಕೋ ಪಾರ್ಕ್ ದೇಶದ ಮೊದಲ ಕಾರ್ಟೂನ್ ಪಾರ್ಕ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು ಪ್ರವಾಸಿಗರ ಕಣ್ಮನ ಸೆಳೆಯುತ್ತ ಪ್ರವಾಸೋದ್ಯಮಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ.
ದಾಂಡೇಲಿಯ ಬಸ್ ನಿಲ್ದಾಣದ ಹತ್ತಿರದಲ್ಲೇ ಇರುವ ದಂಡಕಾರಣ್ಯ ಪಾರ್ಕ್ ವಿಶೇಷವಾಗಿ ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಸುಂದರವಾದ ಹಚ್ಚ ಹಸಿರ ಕಾಡಿನೊಳಗಿರುವ ಈ ಪಾರ್ಕಿನಲ್ಲಿ ಬಗೆ ಬಗೆಯ ಕಾರ್ಟೂನ್ ಆಕೃತಿಗಳು ಮಕ್ಕಳನ್ನು ಕೈ ಬೀಸಿ ಕರೆಯುವಂತಿದೆ.
ಇನ್ನು ವಿವಿಧ ಜೋಕಾಲಿಗಳು ಮಕ್ಕಳಿಗೆ ಖುಷಿಯನ್ನು ತಂದುಕೊಡುತ್ತಿವೆ. ಶಾಲಾ/ಕಾಲೇಜುಗಳಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಪ್ರವಾಸವನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದ ವಿವಿದೆಡೆಗಳಿಂದ ಇಲ್ಲಿಗೆ ಪ್ರವಾಸಿಗರು ಬರುತ್ತಿರುವುದರ ಜೋತೆಗೆ ಹೊರ ರಾಜ್ಯಗಳ ಪ್ರವಾಸಿಗರು ಸಹ ಇಲ್ಲಿಗೆ ಬಂದು ಇಲ್ಲಿಯ ಪಾರ್ಕಿನ ಸವಿಯನ್ನು ಅನುಭವಿಸಿ ಸಂತಸ ಪಡುತ್ತಿದ್ದಾರೆ.
ಹಾಳುಕೊಂಪೆಯಾಗಿದ್ದ ಈ ಪ್ರದೇಶವನ್ನು ಅರಣ್ಯ ಇಲಾಖೆಯವರು ದಂಡಕಾರಣ್ಯ ಇಕೋ ಪಾರ್ಕನ್ನಾಗಿಸಿ ದಟ್ಟ ಕಾಡಿನ ರಕ್ಷಣೆಯ ಜೊತೆಗೆ ಪ್ರವಾಸೋದ್ಯಮದ ಪ್ರಗತಿಗೆ ಕಾರಣವಾಗಿರುವುದು ನಿಜಕ್ಕೂ ಶ್ಲಾಘನೀಯ.