• Slide
  Slide
  Slide
  previous arrow
  next arrow
 • ಅರಣ್ಯವಾಸಿಗಳಿಂದ ಡಿ.22ಕ್ಕೆ ಬೆಳಗಾಂವ ಚಲೋ: ಮನೆಗೆ ಒಬ್ಬ ಅತಿಕ್ರಮಣದಾರರು ಭಾಗವಹಿಸಲು ರವೀಂದ್ರ ನಾಯ್ಕ ಕರೆ

  300x250 AD

  ಜೋಯಿಡಾ: ಅರಣ್ಯವಾಸಿಗಳ ಸಮಸ್ಯೆಗೆ ಸ್ಫಂದಿಸುವ ದಿಶೆಯಲ್ಲಿ ಬೆಳಗಾಂವದಲ್ಲಿ ಜರಗುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಸರಕಾರದ ಗಮನ ಸೆಳೆಯುವ ದಿಶೆಯಲ್ಲಿ ಡಿಸೆಂಬರ್ 22 ರಂದು ಹಮ್ಮಿಕೊಂಡ ಅರಣ್ಯವಾಸಿಗಳಿಂದ ಬೆಳಗಾಂವ ಚಲೋ ಕಾರ್ಯಕ್ರಮಕ್ಕೆ ಅತಿಕ್ರಮಣದಾರರು ಮನೆಗೆ ಒಬ್ಬರಂತೆ ಆಗಮಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಕರೆ ನೀಡಿದರು.

  ಅವರು ಇಂದು ಜೋಯಿಡಾ ತಾಲೂಕಿನ, ಗಣೇಶಗುಡಿಯ, ಕಾಳೇಶ್ವರ ಆವರಣದಲ್ಲಿ ಜರುಗಿದ ಬೆಳಗಾಂವ ಚಲೋ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಭೂಮಿ ಹಕ್ಕು ನೀಡಲು ಸರಕಾರವು ವಿಫಲವಾಗಿದ್ದು ಈ ದಿಶೆಯಲ್ಲಿ ಸಾಂಘೀಕ ಹೋರಾಟವು ಅನಿವಾರ್ಯ. ಬೃಹತ್ ಪ್ರಮಾಣದಲ್ಲಿ ಬೆಳಗಾಂವ ಚಲೋ ಕಾರ್ಯಕ್ರಮಕ್ಕೆ ಸ್ಫಂದಿಸುವ ಮೂಲಕ ಸರಕಾರದ ಮೇಲೆ ಒತ್ತಡ ಹಾಕುವುದು ಅನಿವಾರ್ಯವೆಂದು ಅವರು ಹೇಳಿದರು.

  ಪ್ರಾಸ್ತವಿಕ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಸಂಚಾಲಯ ಸುಭಾಷ್ ಗಾವಡಾ ಮಾತನಾಡುತ್ತಾ ಅರಣ್ಯ ಭೂಮಿ ಹಕ್ಕಿಗೆ ಹೋರಾಟ ಅನಿವಾರ್ಯ ಆದ್ದರಿಂದ ಬೆಳಗಾಂವ ಚಲೋಗೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಕ್ರಮಣದಾರರು ಬರಲು ಹೇಳಿದರು.

  300x250 AD

  ಕಾರ್ಯಕ್ರಮದಲ್ಲಿ ಭೀಮ್ಸಿ ವಾಲ್ಮೀಕಿ ಯಲ್ಲಾಪುರ ತಾಲೂಕ ಅಧ್ಯಕ್ಷ, ಅರುಣ ಕುಮಾರ, ಸುಭಾಷ್ ಗಾವಡಾ, ಶರಣಪ್ಪ ಗದಗಿ, ಲಕ್ಷ್ಮೀಷ ಮೂರಾರಿ, ಬಿಬಿ ವೆಂಕಟೇಶ್, ಅಜೀತ್ ತೊರವತ್, ಶಿವದಾಸ ನಾಯರ್, ಮಾದೇವ ರವಳುಜಿ, ಚಾದ್ ಬಸೀರ್ ಕುಟ್ಟಿ ಮುಂತಾದವರು ಉಪಸ್ಥಿತರಿದ್ದರು.

  ಮುಖ್ಯಮಂತ್ರಿಗೆ 10 ಬೇಡಿಕೆಯ ಮನವಿ:
  ನಿರಂತರ ಅರಣ್ಯವಾಸಿಗಳ ಮೇಲೆ ಅರಣ್ಯ ಅಧಿಕಾರಿಗಳಿಂದ ಉಂಟಾಗುತ್ತಿರುವ ದೌರ್ಜನ್ಯ, ಸಕಾರಣ ವಿಲ್ಲದೇ ಅಭಯಾರಣ್ಯ ಪ್ರದೇಶ ವಿಸ್ತರಿಸುವುದು, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿ ಸಂದರ್ಭದಲ್ಲಿ ಅಸಮರ್ಪಕ ಜಿಪಿಎಸ್ ನ್ನು ಸರಿದೂಗಿಸುವುದು, ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ವೈಫಲ್ಯ, ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ-ವಿಧಾನ ಅನುಸರಿಸದೇ ಜರಗುತ್ತಿರುವ ಮಂಜೂರಿ ಪ್ರಕ್ರಿಯೆ ಮುಂತಾದ 10 ಪ್ರಮುಖ ಬೇಡಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ನೀಡಲಾಗುವುದು ಎಂದು ರವೀಂದ್ರ ನಾಯ್ಕ ಹೇಳಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top