• first
  second
  third
  previous arrow
  next arrow
 • ಕಾರು ಅಡ್ಡಗಟ್ಟಿ ಹಲ್ಲೆ; 6 ಲಕ್ಷ ರೂ ದೋಚಿದ ಅಪರಿಚಿತ ದುಷ್ಕರ್ಮಿಗಳು

  300x250 AD

  ಅಂಕೋಲಾ: ತಾಲೂಕಿನ ಮಾಸ್ತಿಕಟ್ಟಾ ಸಮೀಪದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಬೈಕ್’ನಲ್ಲಿ ಆಗಮಿಸಿದ್ದ ಇಬ್ಬರು ಅಪರಿಚಿತರು ಹುಬ್ಬಳ್ಳಿ ವ್ಯಾಪಾರಿಗಳ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿ 6 ಲಕ್ಷ ರೂ. ದೋಚಿದ ಘಟನೆ ನಡೆದಿದೆ.

  300x250 AD


  ಕಾರವಾರ-ಅಂಕೋಲಾದಲ್ಲಿ ಎಲೆಕ್ಟ್ರಿಕಲ್ ಸಾಮಗ್ರಿ ಪೂರೈಸಿ ಹಣ ಸಂಗ್ರಹಿಸಿ, ಬುಧವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಮಾಸ್ತಿಕಟ್ಟಾ ಬಳಿ ತೆರಳುತ್ತಿದ್ದರು. ಈ ವೇಳೆ ಹುಬ್ಬಳ್ಳಿಯ ವಿನೋದ ಬಾಲಚಂದ್ರ ಮತ್ತು ಕೇವಲ ಬಂದ್ ಎಂಬವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಅಪರಿಚಿತರು ಕಾರಿನ ಗ್ಲಾಸ್ ಪುಡಿ ಮಾಡಿ ಹಣದ ಬ್ಯಾಗ್ ಹೊತ್ತೊಯ್ದಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  Share This
  300x250 AD
  300x250 AD
  300x250 AD
  Back to top