ಯಲ್ಲಾಪುರ: ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ತಮ್ಮಕಾರ್ಯಾಲಯದಲ್ಲಿ ಕೊಳಚೆ ನಿರ್ಮೂಲನ ಮಂಡಳಿಯ ಅಧಿಕಾರಿಗಳೊಂದಿಗೆ ಯಲ್ಲಾಪುರ ಹಾಗೂ ಮುಂಡಗೋಡ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಮನೆಗಳ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಿದರು.
ಮುಂಡಗೋಡ ಪಟ್ಟಣದಲ್ಲಿ ಮಂಡಳಿಯಿಂದ ಮಂಜೂರಿಯಾದ ಮನೆಗಳ ಬಿಲ್ ವತಿಸದೇ ಮನೆಗಳು ಸ್ಥಗಿತಗೊಂಡಿದೆ ತುರ್ತಾಗಿ ಬಾಕಿ ಇರುವ ಎಲ್ಲಾ ಬಿಲ್‍ಗಳನ್ನು ಫಲಾನುಭವಿಗಳಿಗೆ ಪಾವತಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು ಹಾಗೂ ಮುಂಡಗೋಡ ಹಾಗೂ ಯಲ್ಲಾಪುರ ಪಟ್ಟಣದಲ್ಲಿ ನಿರ್ಮಾಣವಾಗಲಿರುವ ಜಿ +2 ಮನೆಗಳ ಕುರಿತು, ಫಲಾನುಭವಿಗಳಿಂದ ವಂತಿಗೆ ಸಂಗ್ರಹದ ಕುರಿತಂತೆ ಅಧಿಕಾರಿಗಳೊಂದಿಗೆ ವಿಸ್ಕೃತವಾಗಿ ಚರ್ಚಿಸಿದರು. ಕ್ಷೇತ್ರದ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಘೋಷಿತ ಕೊಳಚೆ ಪ್ರದೇಶಗಳ ಹಕ್ಕುಪತ್ರ ವಿತರಿಸುವ ಕುರಿತಂತೆ ಚರ್ಚಿಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು, ಈ ಸಂದರ್ಭದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಹಾಜರಿದ್ದರು.