• Slide
    Slide
    Slide
    previous arrow
    next arrow
  • ಫ್ಲಾಗ್ ಆಫೀಸರ್ ಕಮಾಂಡ್ ರಾಜೇಂದ್ರ ಬಹದ್ದೂರ್ ಸಿಂಗ್ ನೌಕಾನೆಲೆಗೆ ಭೇಟಿ

    300x250 AD


    ಕಾರವಾರ: ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್ ಚೀಫ್,ವೆಸ್ಟರ್ನ್ ನೇವಲ್ ಕಮಾಂಡ್ ವೈಸ್ ಅಡ್ಮಿರಲ್ ರಾಜೇಂದ್ರ ಬಹದ್ದೂರ್ ಸಿಂಗ್ ಅಧಿಕಾರ ವಹಿಸಿಕೊಂಡ ನಂತರ ಮಂಗಳವಾರ ಕಾರವಾರ ನೌಕಾನೆಲೆಗೆ ಭೇಟಿ ನೀಡಿದರು. ಅವರನ್ನು ರಿಯಲ್ ಅಡ್ಮಿರಲ್ ಮಹೇಶ್ ಸಿಂಗ್ ಬರಮಾಡಿಕೊಂಡರು ಮತ್ತು ಗಾರ್ಡ್ ಆಫ್ ಆನರ್ ನೀಡಿದರು.


    ಭೇಟಿಯ ಸಂದರ್ಭದಲ್ಲಿ ಸೀಬರ್ಡ್ ಐಎನ್‍ಎಸ್ ಕದಂಬದ ಯುದ್ಧ ನೌಕಾ ಹಡಗುಗಳು ಮತ್ತು ಘಟಕಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಿತು ಮತ್ತು ಪ್ರಾಜೆಕ್ಟ್ ಸೀಬರ್ಡ್ ಮೂಲಕ ಮೂಲಸೌಕರ್ಯ ಅಭಿವೃದ್ಧಿಯ ಪ್ರಗತಿಯ ಕುರಿತು ವಿವರಿಸಲಾಯಿತು.


    ಪಶ್ಚಿಮ ನೇವಿ ಕಮಾಂಡನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ವೈಸ್ ಅಡ್ಮಿರಲ್ ಎ.ಬಿ. ಸಿಂಗ್ ಅವರು ಈಸ್ಟರ್ನ್ ನೇವಲ್ ಕಮಾಂಡ್‍ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದರು. ಭಾರತೀಯ ನೌಕಾಪಡೆಯ ಎರಡೂ ಕಾರ್ಯಾಚರಣೆಯ ಕಮಾಂಡ್‍ಗಳ ನೇತೃತ್ವದ ಅಪ್ರತಿಮ ಗೌರವ ಮತ್ತು ವಿಶಿಷ್ಟವಾದ ಪರಿಣಿತಿ ಪಡೆದ ಕೆಲವೇ ಕೆಲವು ಕಮಾಂಡರ್-ಇನ್-ಚೀಫ್‍ಗಳಲ್ಲಿ ಸೇರಿದ್ದಾರೆ.

    300x250 AD


    01 ಜುಲೈ 1983 ರಂದು ನೌಕಾಪಡೆಗೆ ನಿಯೋಜಿಸಲ್ಪಟ್ಟ ವೈಸ್ ಅಡ್ಮಿರಲ್ ರಾಜೇಂದ್ರ ಬಹದ್ದೂರ್ ಸಿಂಗ್ ನ್ಯಾವಿಗೇಷನ್ ಮತ್ತು ಡೈರೆಕ್ಷನ್‍ನಲ್ಲಿ ಪರಿಣಿತರಾಗಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top