• first
    second
    third
    previous arrow
    next arrow
  • ಕ್ಷಯ ರೋಗದ ಬಗ್ಗೆ ನಿರ್ಲಕ್ಷ್ಯತನ ಬೇಡ; ಉದಯಶಂಕರ್

    300x250 AD

    ಶಿರಸಿ: ದೇಶದಲ್ಲಿ ಪ್ರತಿ ಮೂರು ನಿಮಿಷಕ್ಕೆ ಎರಡು ಜನ ಕ್ಷಯ ರೋಗದಿಂದ ಸಾಯುತ್ತಿದ್ದಾರೆ. ವಾರಗಳ ಕಾಲ ಕೆಮ್ಮು, ಹಸಿವೆ ಆಗದಿರುವುದು, ರಕ್ತಸಿಕ್ತ ಕಫ ಮುಂತಾದ ಲಕ್ಷಣಗಳಿದ್ದರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಅವಶ್ಯ ಎಂದು ತಾಲೂಕಿನ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಉದಯಶಂಕರ್ ಹೇಳಿದರು.

    ಅವರು ಎಮ್.ಎಮ್.ಕಲಾ ಮತ್ತು ವಿಜ್ಞಾನ ಕಾಲೇಜಿನ ಮೋಟೆನ್ಸರ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಡೆದ ಎನ್ ಸಿ ಸಿ, ಎನ್ ಎಸ್ ಎಸ್, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ದೇಶದಲ್ಲಿ 4 ಪ್ರತಿಶತ ಕ್ಷಯರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಕ್ಷಯರೋಗಿಗಳಿಗೆಂದೇ ನೇರ ನಿಗಾವಣೆ ಅಲ್ಪಾವಧಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದಕ್ಕೆಂದೇ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿರುತ್ತದೆ. ಇದರ ಜೊತೆಗೆ 500 ಸಹಾಯಧನವನ್ನು ರೋಗಿಗಳಿಗೆ ನೀಡಲಾಗುತ್ತದೆ. ಕ್ಷಯರೋಗದ ಚಿಕಿತ್ಸೆಯನ್ನು ಅಲಕ್ಷಿಸಿದರೆ, ಎಮ್.ಡಿ.ಆರ್.ಟಿ.ಬಿ ಬರುವ ಸಾಧ್ಯತೆಯಿದ್ದು 1 ವರ್ಷ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ರೋಗಿಗಳು ಚಾಚೂತಪ್ಪದೆ ಮಾತ್ರೆ ತೆಗೆದುಕೊಳ್ಳಬೇಕು ಎಂದ ಹೇಳಿದರು.

    ನಂತರದಲ್ಲಿ ಮಾತನಾಡಿದ ಶ್ರೀವಿಜಯ್ ಮಾನಸಿಕ ಆರೋಗ್ಯ ವ್ಯಕ್ತಿಯ ಜೀವನದಲ್ಲಿ ಅತ್ಯಮೂಲ್ಯವಾದದ್ದು. ಮಾನಸಿಕ ಸಮಸ್ಯೆಗಳನ್ನು ವ್ಯಕ್ತಪಡಿಸಲು ಹಿಂಜರಿಕೆ ಬೇಡ. ಕೌನ್ಸಿಲಿಂಗ್ ಮೂಲಕ ಮಾನಸಿಕ ಸಮಸ್ಯೆಯ ಚಿಕಿತ್ಸೆ ಸಾಧ್ಯ ಎಂದರು.

    300x250 AD


    ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಕೋಮಲಾ ಭಟ್, ಎನ್‌ಎಸ್‌ಎಸ್ ಅಧಿಕಾರಿ ಪ್ರೊ ಕೆ ಎನ್ ರೆಡ್ಡಿ, ಸ್ಕೌಟ್ಸ್ ಮತ್ತು ಗೈಡ್ ನ ಅಧಿಕಾರಿ ಪ್ರೊ ರವಿ ಕೊಳೆಕರ್, ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ರಾಘವೇಂದ್ರ ಹೆಗಡೆ ಉಪಸ್ಥಿತರಿದ್ದರು

    Share This
    300x250 AD
    300x250 AD
    300x250 AD
    Back to top