• first
    second
    third
    previous arrow
    next arrow
  • ಟಿಎಸ್‌ಎಸ್’ನಲ್ಲಿ ಡಿ.16, 17ಕ್ಕೆ ಅಟೋ- ಪ್ರೋಪರ್ಟಿ ಎಕ್ಸ್‌ಪೋ

    300x250 AD

    ಶಿರಸಿ: ವೈವಿಧ್ಯಮಯ ಮತ್ತು ಹೊಸತನವನ್ನು ತನ್ನ ಪ್ರತಿ ಗ್ರಾಹಕ ಸ್ನೇಹಿ ಚಟುವಟಿಕೆಯಲ್ಲಿ ವ್ಯಕ್ತಪಡಿಸುತ್ತಿರುವ ಟಿ.ಎಸ್.ಎಸ್.ನಲ್ಲಿ ಡಿಸೆಂಬರ್ 16, 17 ರಂದು ತನ್ನ ಆವರಣದಲ್ಲಿ ಅಟೋ ಮತ್ತು ಪ್ರೋಪರ್ಟಿಎಕ್ಸ್‌ಪೋ-2021 ಆಯೋಜಿಸಿದೆ.


    ಅಟೋ ಎಕ್ಸ್‌ಪೋದಲ್ಲಿ ದ್ವಿಚಕ್ರ ವಾಹನದ ಪ್ರಸಿದ್ಧ ಪೂರೈಕೆ ಕಂಪನಿಗಳಾದ ಹೋಂಡಾ, ಸುಜುಕಿ, ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳಾದ ಅಮೋಘ ಮೋಟಾರ‍್ಸ್, ರಾಣಿ ಮೋಟಾರ‍್ಸ್ ಕಂಪನಿಗಳ ಪ್ರತಿನಿಧಿಗಳು ಹಾಗೂ ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಝುಕಿ, ಹುಂಡೈ, ಜೀಪ್, ನೆಕ್ಸಾ, ಫೋರ್ಡ್, ಟಾಟಾ ಮೋಟರ್ಸ್, ಟೊಯೋಟಾ, ರೆನಾಲ್ಟ್, ಕಿಯಾ ಮತ್ತು ಮೊರಿಸ್ ಗರಾಜಸ್(ಎಮ್.ಜಿ.) ಇವರು ವಾಹನಗಳೊಂದಿಗೆ ಭಾಗವಹಿಸಲಿದ್ದಾರೆ. ಒಂದೇ ಸೂರಿನಡಿಯಲ್ಲಿ ಗ್ರಾಹಕರು ಖರೀದಿಸ ಬಯಸುವ ವಾಹನಗಳ ತುಲನಾತ್ಮಕ ವಿಮರ್ಶೆ ಇದರಿಂದ ದೊರೆಯಲ್ಲಿದ್ದು, ಖರೀದಿಗೆ ಅನುಕೂಲಕರವಾಗಲಿದೆ. ಜೊತೆಗೆ ಪ್ರೊಪರ್ಟಿ ಎಕ್ಸ್‌ಪೋದಲ್ಲಿ ತೋಟ, ಜಮೀನು, ನಿವೇಶನ ಇತ್ಯಾದಿಗಳ ಕೊಡು-ಕೊಳ್ಳುವಿಕೆಗೆ ನೇರ ಅವಕಾಶ ಕಲ್ಪಿಸಲಾಗಿದೆ.

    300x250 AD


    ಅಟೋ & ಪ್ರೋಪರ್ಟಿಎಕ್ಸ್‌ಪೋ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಡಿ.16 ಗುರುವಾರ ಬೆಳಿಗ್ಗೆ 10.30 ಘಂಟೆಗೆ ಜರುಗಲಿದ್ದು, ಶಿರಸಿ ವಿಭಾಗದ ಡಿ.ವೈ.ಎಸ್.ಪಿಯವರಾದ ರವಿ ನಾಯ್ಕ ಉದ್ಘಾಟಿಸಲಿದ್ದಾರೆ. ಎರಡು ದಿನ ನಡೆಯಲಿರುವ ಎಕ್ಸ್ಪೋಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಿ ಪ್ರಯೋಜನವನ್ನು ಪಡೆಯಬೇಕೆಂದು ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top