ಶಿರಸಿ: ಡಿ.10, 11 ರಂದು ಧಾರವಾಡದಲ್ಲಿ ಜರುಗಿದ ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದ ಬಿ.ಕಾಂ ಎರಡನೇ ವರ್ಷದ ವಿದ್ಯಾರ್ಥಿ ಪ್ರಭಾತ.ವಿ.ವಾಗ್ ಯನಿರ್ವಸಿಟಿ ಬ್ಲೂ ಆಗಿ ಆಯ್ಕೆಗೊಂಡಿದ್ದಾನೆ.
ಆ ಮೂಲಕ ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯದ ಟೇಬಲ್ ಟೆನ್ನಿಸ್ ಕ್ರೀಡೆಗೆ ಪಾಲ್ಗೊಳ್ಳಲು ಆಯ್ಕೆ ಆಗಿದ್ದು, ಈತನ ಈ ಸಾಧನೆಗೆ ಎಂ.ಇ.ಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಕಾಲೇಜು ಸಮಿತಿ ಚೇರಮನ್ ವರೀಂದ್ರ ಕಾಮತ್, ಪ್ರಾಚಾರ್ಯ ಡಾ.ಟಿ.ಎಸ್.ಹಳೆಮನೆ, ದೈಹಿಕ ನಿರ್ದೇಶಕ ಪ್ರೊ. ಶ್ರೀಶಾ ನಾಯಕ ಹಾಗೂ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.