ಶಿರಸಿ: ಸೋಂದಾ ಸ್ವರ್ಣವಲ್ಲೀ ಮಠ, ವಾದಿರಾಜ ಮಠ, ಜೈನ ಮಠ, ಪರಂಪರೆ ಇಲಾಖೆ, ಜಾಗೃತ ವೇದಿಕೆ ಸೋಂದಾ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಸಮಿತಿಯ ಸಹಭಾಗಿತ್ವದಲ್ಲಿ ನಡೆಯುವ ಸೋಂದಾ ಇತಿಹಾಸೋತ್ಸವ ಮತ್ತು ರಾಷ್ಟ್ರ ಮಟ್ಟದ ಇತಿಹಾಸ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಗಣಿತಶಾಸ್ತ್ರಜ್ಞರಾದ ಡಾ.ಬಾಲಚಂದ್ರ ರಾವ್ ಬೆಂಗಳೂರು ಮತ್ತು ಈ ವರ್ಷದ ಸೋದೆ ಸದಾಶಿವರಾಯ ಪ್ರಶಸ್ತಿಗೆ ಖ್ಯಾತ ಶಾಸನತಜ್ಞರಾದ ಡಾ.ದೇವರಕೊಂಡಾರೆಡ್ಡಿ ಆಯ್ಕೆಯಾಗಿರುತ್ತಾರೆ.
2022 ಜನವರಿ 8 ಮತ್ತು 9 ರಂದು ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಮ್ಮೇಳನ ಸೋಂದಾದ ಮೂರು ಧರ್ಮಪೀಠಗಳ ಶ್ರೀಗಳವರು, ಗಣ್ಯರು, ವಿಜ್ಞಾನಿಗಳು, ಇತಿಹಾಸಕಾರರ ಸಮ್ಮುಖದಲ್ಲಿ ನಡೆಯಲಿದೆ. ಈ ವರ್ಷದ ಸಮ್ಮೇಳನ ಭಾರತದ ಭವ್ಯತೆಯನ್ನು ಅನಾವರಣಗೊಳಿಸಲಿದೆ ಎಂದು ಸಮ್ಮೇಳನದ ಸಂಚಾಲಕರಾದ ಲಕ್ಷ್ಮೀಶ್ ಸೋಂದಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.