• Slide
  Slide
  Slide
  previous arrow
  next arrow
 • ಅಂಗಾಂಗ ದಾನ ಮಾಡಿ ಉಳಿದ 8 ಜೀವಕ್ಕೆ ಬೆಳಕಾದ ಶಿರಸಿ ಮಹಿಳೆ

  300x250 AD

  ಶಿರಸಿ: ಸಾವಿನ ಸಂಕಷ್ಟ ಸಂದರ್ಭದಲ್ಲಿ ಕೂಡಾ ಇತರೆ 8 ಜೀವಗಳನ್ನು ಉಳಿಸುವ ಮೂಲಕ ಸಾರ್ಥಕತೆಯನ್ನು ಮೆರೆದ ತಾಯಿ ಶಿರಸಿಯ ಸುನಂದಾ ಸತೀಶ ನಾಯ್ಕ.
  ನಗರದ ವಿದ್ಯಾನಗರದ 54 ವರ್ಷದ ಸುನಂದಾ ಅಕಾಲಿಕ ಮರಣ ಹೊಂದಿದರು. ಇಬ್ಬರು ಮಕ್ಕಳನ್ನು ಪಡೆದ ಈಕೆ ಸಾವಿನ ಸಮಯದಲ್ಲಿ ಮತ್ತೆ 8 ಜನರ ಜೀವ ಕಾಪಾಡಿದ್ದಾರೆ.
  ಇವರು ಮೆದುಳಿನ ರಕ್ತಸ್ರಾವ ಉಂಟಾದ ನಂತರ ಧಾರವಾಡದ ಎಸ್‍ಡಿಎಂ ಆಸ್ಪತ್ರೆಯಲ್ಲಿ ಐಸಿಯು ನಲ್ಲಿ ಇರಿಸಲಾಗಿತ್ತು. ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಹೃದಯಾಘಾತದಿಂದ ತಂದೆಯನ್ನು ಕಳೆದುಕೊಂಡ ಮಕ್ಕಳು ಅಮ್ಮನನ್ನು ಈ ಸ್ಥಿತಿಯಲ್ಲಿ ನೋಡುತ್ತಿದ್ದರು. ವೈದ್ಯರು ನೀಡಿದ ಚಿಕಿತ್ಸೆಯಿಂದ ಚೇತರಿಸಿಕೊಳ್ಳದ ಮಹಿಳೆಯ ಬ್ರೇನ್ ಡೆಡ್ ಎಂದು ಘೋಷಿಸಲಾಯಿತು.
  ಇಂತಹ ದಯನೀಯ ಸ್ಥಿತಿಯಲ್ಲಿಯೂ ಸಹ, ತಾಯಿಯ ಅಂಗಾಂಗ ದಾನ ಮಾಡುವ ಮೂಲಕ ಅಗತ್ಯವಿದ್ದ 8 ಜನರುಗೆ ಜೀವನಾಸರೆಯಾಗಿದ್ದಾರೆ. ಮಹಿಳೆಯ ಮಕ್ಕಳಾದ ರಕ್ಷಂದಾ ಹಾಗೂ ನಿಶಾಂತ ನಾಯ್ಕ ಈ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top