• first
    second
    third
    previous arrow
    next arrow
  • ಕಾರ್ ಪಲ್ಟಿ; ಕಾನಗೋಡ ಗ್ರಾ.ಪಂ ಸದಸ್ಯ ದಿನು ನಾಯ್ಕ ಸಾವು

    300x250 AD

    ಶಿರಸಿ: ಪರಿಷತ್ ಚುನಾವಣೆ ಮತ ಎಣಿಕೆಗೆಂದು ಕಾರವಾರಕ್ಕೆ ತೆರಳಿ ಹಿಂತಿರುಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಇನೋವಾ ಕಾರ್ ಪಲ್ಟಿಯಾಗಿ ತಾಲೂಕಿನ ಕಾನಗೋಡ ಗ್ರಾ.ಪಂ ಸದಸ್ಯ ಸಾವು, ದಿವಾಕರ ನಾಯ್ಕ (46) ಸಾವನ್ನಪ್ಪಿದ ಘಟನೆ ಕುಮಟಾದ ಅಂತ್ರವಳ್ಳಿ ಬಳಿ ರಾತ್ರಿ ನಡೆದಿದೆ.

    300x250 AD


    ದಿವಾಕರ (ದಿನು) ನಾಯ್ಕ ಅವರು ಪರಿಷತ್ ಚುನಾವಣೆ ಮತ ಎಣಿಕೆ ವೀಕ್ಷಣೆಗೆ ಶಿರಸಿಯಿಂದ ಕಾರವಾರಕ್ಕೆ ತೆರಳಿದ್ದರು. ನಂತರ ವಾಪಸ್ ಶಿರಸಿಗೆ ಬರುತ್ತಿದ್ದ ವೇಳೆಯಲ್ಲಿ ನಿಯಂತ್ರಣ ತಪ್ಪಿದ ಕಾರ್ ಪಲ್ಟಿಯಾಗಿ ಸಾವನ್ನಪ್ಪಿದ್ದಾರೆ. ಇವರು ಭೀಮಣ್ಣ ನಾಯ್ಕ ಕಟ್ಟಾ ಅಭಿಮಾನಿಯಾಗಿದ್ದರು ಎನ್ನಲಾಗಿದ್ದು, ಗ್ರಾ.ಪಂ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದರು. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share This
    300x250 AD
    300x250 AD
    300x250 AD
    Back to top