• first
    second
    third
    previous arrow
    next arrow
  • ಅಕ್ರಮ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿ ವಶಕ್ಕೆ

    300x250 AD


    ಅಂಕೋಲಾ: ಅವಧಿ ಮೀರಿದ ಪಾಸ್ ಬಳಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ಪೆÇಲೀಸರು ವಶಪಡಿಸಿಕೊಂಡ ಘಟನೆ ಅಂಕೋಲಾದಲ್ಲಿ ನಡೆದಿದೆ.

    ಕಾರವಾರದಿಂದ ಯಲ್ಲಾಪುರ ಕಡೆಗೆ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಗಳನ್ನು ತಪಾಸಣೆಗೊಳಪಡಿಸಿದಾಗ ಪಾಸುಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅವಧಿ ಮೀರಿದ ಪಾಸುಗಳನ್ನು ಬಳಸಿ ಮರಳು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    300x250 AD

    ಅಂಕೋಲಾ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಹತೋಟಿಯಲ್ಲಿದ್ದರೂ ಬೇರೆ ತಾಲೂಕಿನ ಕೆಲವರು ಪಾಸಿನ ದುರುಪಯೋಗಪಡಿಸಿಕೊಂಡು ಅಕ್ರಮ ಮರಳುಗಾರಿಕೆಯನ್ನು ನಡೆಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ಕಾರವಾರದ ಕಾಳಿ ನದಿಯಲ್ಲಿ ಮರಳುಗಾರಿಕೆ ನಡೆಸಲು ಸರಕಾರ ಶರತ್ತುಬದ್ದ ಅನುಮತಿ ನೀಡಿತ್ತು.

    Share This
    300x250 AD
    300x250 AD
    300x250 AD
    Back to top