• first
  second
  third
  previous arrow
  next arrow
 • ಪುನೀತ ರಾಜಕುಮಾರ ಅಭಿಮಾನಿ ಬಳಗದಿಂದ ನೇತ್ರದಾನ ಜಾಗೃತಿ ಅಭಿಯಾನ

  300x250 AD


  ಅಂಕೋಲಾ: ಕೇವಲ ಚಿತ್ರ ನಟನಾಗಿರದೆ ಸಾಮಾಜಿಕ ಕಾರ್ಯದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ ಎಲ್ಲಿಯೂ ಕೂಡ ಪ್ರಚಾರ ಬಯಸದ ಪುನೀತರಾಜಕುಮಾರ ನಿಧನದ ನಂತರ ಆತನ ಕೊಡುಗೆ ಸಮಾಜಕ್ಕೆ ತಿಳಿಯುವಂತಾಯಿತು. ಇಂತಹ ವ್ಯಕ್ತಿಯ ಪ್ರತಿಮೆ ನಿರ್ಮಿಸುವುದರ ಜತೆಗೆ ನೇತ್ರದಾನದಂತಹ ಮಹತ್ಕಾರ್ಯವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾದದ್ದು ಎಂದು ತಾ.ಪಂ. ನಿವೃತ್ತ ವ್ಯವಸ್ಥಾಪಕ ಕೆ.ಡಿ.ನಾಯ್ಕ ಹೇಳಿದರು.

  ತಾಲೂಕಿನ ಮಂಜಗುಣಿಯ ಪುನೀತರಾಜಕುಮಾರ ಅಭಿಮಾನಿ ಬಳಗದವರು ಹಮ್ಮಿಕೊಂಡ ನೇತ್ರದಾನದ ಜಾಗೃತಿ ಅಭಿಯಾನದಲ್ಲಿ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಇಂತಹ ಕಾರ್ಯಕ್ರಮಗಳನ್ನು ಯುವಕರು ಮಾಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.


  ನಿವೃತ್ತ ಕೃಷಿ ಅಧಿಕಾರಿ ವಿ.ಸಿ.ನಾಯ್ಕ ಮಾತನಾಡಿ, ಪುನೀತರಾಜಕುಮಾರಅವರುತಮ್ಮ ಕಣ್ಣುಗಳನ್ನು ಕೂಡದಾನ ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿಯಾಗುವಂತೆ ಮಾಡಿದ್ದಾರೆ. ಈ ನಿಟ್ಟಿನಲ್ಲಿರಾಜ್ಯಾದ್ಯಂತ ನೇತ್ರದಾನ ನಡೆಯುತ್ತಿದೆ. ನಮ್ಮ ಊರಿನಲ್ಲಿಯೂ ಕೂಡ ನೇತ್ರದಾನಕ್ಕೆ ಚಾಲನೆ ನೀಡಿರುವುದು ಹರ್ಷದಾಯಕ ಎಂದರು.

  300x250 AD


  ಪುನೀತರಾಜಕುಮಾರ ಅಭಿಮಾನಿ ಬಳಗದ ಗೌರವಾಧ್ಯಕ್ಷ ಶ್ರೀಪಾದ ಟಿ. ನಾಯ್ಕ, ಉಪಾಧ್ಯಕ್ಷ ಚಂದ್ರಕಾಂತ ಹರಿಕಂತ್ರ, ನೇತ್ರದಾನದ ಸಂಚಾಲಕ ಜಿ.ಆರ್. ತಾಂಡೇಲ ಮಾತನಾಡಿದರು. ಸಂಚಾಲಕರಾದ ಪ್ರವೀಣ ವಿ. ನಾಯ್ಕ, ಕಾರ್ಯದರ್ಶಿ ಪ್ರಶಾಂತ ವಿ. ನಾಯ್ಕ, ಪದಾಧಿಕಾರಿಗಳಾದ ಮಂಜುನಾಥಆರ್. ನಾಯ್ಕ, ಸಂತೋಷ ವಿ. ನಾಯ್ಕ, ಗಣೇಶ ವಿ. ನಾಯ್ಕ, ಅನೀಲ ಎಂ. ನಾಯ್ಕ, ಜಗದೀಶಎಸ್. ನಾಯ್ಕ, ಅನೀಲ ಜೆ. ನಾಯ್ಕ, ಹಮ್ಮು ನಾಯ್ಕ ಸೇರಿದಂತೆ ಇತರರಿದ್ದರು. ಸಮಿತಿಯ ಅಧ್ಯಕ್ಷ ನಾಗರಾಜ ಮಂಜಗುಣಿ ಸ್ವಾಗತಿಸಿದರು. ಸಂಚಾಲಕ ರವಿ ಎನ್. ನಾಯ್ಕ ವಂದಿಸಿದರು.

  Share This
  300x250 AD
  300x250 AD
  300x250 AD
  Back to top